ಬೆಂಗಳೂರು: ಇಂಡಿಗೋ ಸಂಸ್ಥೆಯ ವೆಬ್ ಸೈಟ್ ಹ್ಯಾಕ್ ಆಗಿದೆ. ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ವ್ಯಕ್ತಿನೇ ತನ್ನ ಬ್ಯಾಗ್‌ಗಾಗಿಯೇ ವೆಬ್ ಸೈಟ್ ಹ್ಯಾಕ್ ಮಾಡಿದ್ದಾನೆ. ಈ ಘಟನೆ ಈಗ ಬೆಳಕಿಗೆ ಬಂದಿದೆ.
ಇಂಡಿಗೋ ವೆಬ್ ಸೈಟ್ ಹ್ಯಾಕ್ ಮಾಡಿದ ಬೆಂಗಳೂರು ಮೂಲದ ವ್ಯಕ್ತಿ ಹೆಸರು ನಂದನ್‌ಕುಮಾರ್. ಈತ ತಾನು ಯಾಕೆ ವೆಬ್ ಸೈಟ್ ಹ್ಯಾಕ್ ಮಾಡಿದೆ ಅಂತಲೂ ಹೇಳಿಕೊಂಡಿದ್ದಾನೆ.
ಹೌದು.ನಂದನ್ ಕುಮಾರ್ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ನಂದನ್ ಬ್ಯಾಗ್ ಮಿಸ್ ಆಗಿತ್ತು. ಸಹ ಪ್ರಯಾಣಿಕರ ಜೊತೆಗೂ ಆ ಬ್ಯಾಗ್ ಹೋಗಿ ಬಿಟ್ಟಿತ್ತು.
ಅದನ್ನ ಪಡೆಯಲು ಇಂಡಿಗೋ ಅಷ್ಟೇನೂ ಸಹಾಯಕರ ಕೊಟ್ಟಿರಲಿಲ್ಲ. ಸಹ ಪ್ರಯಾಣಿಕನ ಫೋನ್ ನಂಬರ್ ಪಡೆಯಲು ನಾನು ಇಂಡಿಗೋ ವೆಬ್ ಸೈಟ್ ಹ್ಯಾಕ್ ಮಾಡಿದೆ ಅಂತಲೇ ನಂದನ್ ಹೇಳಿಕೊಂಡಿದ್ದಾನೆ.
PublicNext
31/03/2022 02:41 pm