ಹೈದ್ರಾಬಾದ್: ಬೀದಿ ನಾಯಿಗಳ ಹಾವಳಿ ಬಹುತೇಕ ಎಲ್ಲ ರಾಜ್ಯದಲ್ಲೂ ಇದೆ. ಅದರಂತೆ ತೆಲಂಗಾಣದಲ್ಲೂ ಬೀದಿ ನಾಯಿ ಹಾವಳಿ ಇದೆ. ಆದರೆ ಇಲ್ಲಿ ಈಗ 100 ನಾಯಿಗಳನ್ನ ವಿಷದ ಇಂಜೆಕ್ಷನ್ ಕೊಟ್ಟು ಕೊಂದು ಹಾಕಲಾಗಿದೆ.
ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿಯೇ ಈ ಕ್ರೂರ ಕೆಲಸ ಮಾಡಲಾಗಿದೆ. ಇಂಜೆಕ್ಷನ್ ಕೊಟ್ಟು ಕೊಂದು ಹಾಕಿರೋ ನಾಯಿಗಳನ್ನ ಹಳೆ ಬಾವಿಯಲ್ಲಿ ಹೂತು ಹಾಕಲಾಗಿದೆ.
ಸಿದ್ದಿಪೇಟೆ ಜಿಲ್ಲೆಯ ಜಗದೇವಪುರ ವಲಯದ ತಿಗುಲ್ ಗ್ರಾಮದಲ್ಲಿ ನಾಯಿ ಹಾವಳಿ ಹೆಚ್ಚೇ ಇತ್ತು. ಗ್ರಾಮಸ್ಥರು ಕೂಡ ಈ ಬಗ್ಗೆ ದೂರು ಕೊಡ್ತಾನೇ ಇದ್ದರು. ಈ ಹಿನ್ನೆಲೆಯಲ್ಲಿಯೇ ಪಂಚಾಯತ್ ನವರು ನಾಯಿಗಳಿಗೆ ವಿಷದ ಚುಚ್ಚು ಮದ್ದುಕೊಡಿಸಿದ್ದಾರೆ.
ಆದರೆ ದುರಂತ ಅಂದ್ರೆ ಈ ಸಾಕು ನಾಯಿವೊಂದು ಕೂಡ ಈ ವಿಷದ ಚುಚ್ಚು ಮದ್ದಿಗೆ ಬಲಿಯಾಗಿದೆ. ಇದರಿಂದ ಬೇಸರಗೊಂಡ ಗ್ರಾಮದ ಆ ನಾಯಿ ಮಾಲೀಕ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ ಆಫ್ ಇಂಡಿಯಾ ಚಾರಿಟಿಗೆ ಮಾಹಿತಿ ಕೊಟ್ಟಿದ್ದರು. ಆಗಲೇ ಗ್ರಾಮದ ಬೀದಿ ನಾಯಿಗಳು ಕೊಂದಿರೋ ವಿಷಯ ಬೆಳಕಿಗೆ ಬಂದಿದೆ.
PublicNext
30/03/2022 04:09 pm