ಲಕ್ನೋ: ಆಸ್ತಿಯ ವಿಚಾರಕ್ಕೆ ಅಂಗವಿಕಲನ ಮೇಲೆ ಮಹಿಳೆ ಹಾಗೂ ಓರ್ವ ಪುರುಷ ಕಟ್ಟಿಗೆಯಿಂದ ಥಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಘಟನೆ ನಡೆದಿದೆ. ಈ ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆಗೆ ಒಳಗಾದ ಅಂಗವಿಕಲ ವ್ಯಕ್ತಿ ಹಾಗೂ ಹಲ್ಲೆ ನಡೆಸಿದವರು ಸಂಬಂಧಿಕರಾಗಿದ್ದಾರೆ. ಕೊರೊನಾಗೂ ಮುನ್ನ ಅಂಗವಿಕಲ ವ್ಯಕ್ತಿ ಜಗನ್ ಕಾಶ್ಮೀರದಲ್ಲಿ ನಲೆಸಿದ್ದ. ಕೊರೊನಾ ಮಹಾಮಾರಿಯಿಂದ ವಾಪಸ್ ತನ್ನ ಗ್ರಾಮಕ್ಕೆ ಬಂದಿದ್ದಾನೆ. ಈ ವೇಳೆ ಆತ ತನ್ನ ಆಸ್ತಿಯನ್ನು ನೀಡುವಂತೆ ಕೇಳಿದ್ದಕ್ಕೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯವನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಪೊಲೀಸರು, ಅಂಗವಿಕಲನ ಮೇಲೆ ಹಲ್ಲೆ ನಡೆಸಿದ ಪುರುಷ ಮತ್ತು ಮಹಿಳೆಯನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
PublicNext
29/03/2022 04:07 pm