ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಶಿ ಭವಿಷ್ಯದಲ್ಲಿ ದೋ‍ಷ: ಹೆತ್ತ ಮಗುವನ್ನೇ ನದಿಗೆ ಎಸೆದ ತಾಯಿ!

ಚೆನ್ನೈ: ರಾಶಿ ಭವಿಷ್ಯದಲ್ಲಿ ದೋ‍ಷವಿದೆ ಎಂದು ತಾಯಿಯೊಬ್ಬಳು ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ನದಿಗೆ ಎಸೆದು ಕೊಲೆಗೈದ ಅಮಾನವೀಯ ಘಟನೆ ತಮಿಳುನಾಡಿನ ದಿಂಡಿಗಲ್​ನಲ್ಲಿ ನಡೆದಿದೆ.

ದಿಂಡಿಗಲ್ ಜಿಲ್ಲೆಯ ಪಳನಿ ಸಮೀಪದ ರಾಜಪುರಂ ಪಂಚಾಯತ್​​ನ ಗ್ರಾಮದ ಲತಾ ತನ್ನ ಮಗುವನ್ನೇ ಕೊಲೆಗೈದ ತಾಯಿ. ಮಹೇಶ್ವರನ್​ ಮತ್ತು ಲತಾ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೊದಲನೇ ಗಂಡು ಮಗುವಿಗೆ ಈಗ ಮೂರು ವರ್ಷ. ಎರಡನೇ ಮಗುವಿಗೆ ಕೇವಲ ನಾಲ್ಕು ತಿಂಗಳಾಗಿದ್ದು, ಅದರ ಹೆಸರು ಗೋಕುಲ್​.

ಮಾರ್ಚ್​​ 23ರಂದು ಮಹೇಶ್ವರನ್​ ಕೆಲಸಕ್ಕೆ ತೆರಳಿದಾಗ ಲತಾ ಗೋಕುಲ್​ನನ್ನು ತೆಗೆದುಕೊಂಡು ಪಾಲಾರು-ಪೊರುಂದಲಾರು ನದಿಯ ಜಲಾಶಯಕ್ಕೆ ಎಸೆದ್ದಳು. ಮಗುವನ್ನು ಸ್ಥಳೀಯರೇ ರಕ್ಷಿಸಿ, ಪಳನಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಪರೀಕ್ಷಿಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪಳನಿ ಪೊಲೀಸರಿಗೆ ತಲುಪಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಗುವಿನ ಪೋಷಕರನ್ನು ಗುರುತಿಸಿ, ವಿಚಾರಣೆ ನಡೆಸಿದಾಗ ಮೊದಲಿಗೆ ಲತಾ ಅನುಮಾನಾಸ್ಪದವಾಗಿ ಉತ್ತರ ನೀಡಿದ್ದಾಳೆ. ನಂತರ ಗಂಭೀರ ವಿಚಾರಣೆ ನಡೆಸಿದಾಗ, ಮಗನ ರಾಶಿ ಭವಿಷ್ಯ ಸರಿಯಿರಲಿಲ್ಲ ಎಂಬ ಕಾರಣಕ್ಕೆ ಕೊಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.

Edited By : Vijay Kumar
PublicNext

PublicNext

24/03/2022 07:14 pm

Cinque Terre

49.59 K

Cinque Terre

3

ಸಂಬಂಧಿತ ಸುದ್ದಿ