ವಿಜಯಪುರ : ಅಪ್ರಾಪ್ತ ಬಾಲಕನನ್ನ ಬೆತ್ತಲಾಗಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಘಟನೆ.
12 ವರ್ಷದ ಅಪ್ರಾಪ್ತ ಬಾಲಕನನ್ನ ಕಂಬಕ್ಕೆ ಕಟ್ಟಿ ಬಣ್ಣ ಹಾಕಿ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಡವಡಗಿ ಗ್ರಾಮದ ಮುಖಂಡ ಹಣಮಂತರಾಯ ಮಡಿಕೇಶ್ವರ ಎಂಬುವವರು ಈ ನೀಚ ಕೃತ್ಯ ಮಾಡಿದ್ದಾರೆ.
ಬಾಲಕ ಎಲ್ಲರಿಗೂ ಅಶ್ಲೀಲವಾಗಿ ಬೈಯುತ್ತಿದ್ದ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆಯಂತೆ ಇನ್ನು ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ್ದಿದ್ದಾರೆ.
ಈ ಘಟನೆ ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
23/03/2022 07:25 pm