ಮುಂಬೈ: ಜೈಲಿನಿಂದ ಹೇಗೆ ಎಸ್ಕೇಪ್ ಆಗೋದು ಅಂತ ಖೈದಿಯೊಬ್ಬ ಡೆಮೋ ತೋರಿಸಿದ್ದಾನೆ. ಇದನ್ನು ನೋಡಿದ ಪೊಲೀಸರು ಫುಲ್ ಶಾಕ್ ಆಗಿದ್ದಾರೆ.
ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ ವಾಡ್ ಚಕನ್ ಪೊಲೀಸ್ ಠಾಣೆಯಲ್ಲಿ ಈ ವಿಶೇಷ ಡೆಮೋ ನಡೆದಿದೆ. ಜೈಲಿನ ದ್ವಾರಕ್ಕೆ ಬೀಗ ಹಾಕಿದ್ದರೂ, ಖೈದಿ ಬೀಗ ತೆಗೆಯದೇ ಕಂಬಿಗಳ ಮಧ್ಯದಿಂದ ತುಂಬಾ ಸರಳವಾಗಿ ಹೊರ ಬಂದು ಎಸ್ಕೇಪ್ ಆಗಿದ್ದ. ಬಳಿಕ ಆತನನ್ನು ಬಂಧಿಸಿದ ಪೊಲೀಸರು, ಲಾಕಪ್‌ಗೆ ಹಾಕಿ ತಪ್ಪಿಸಿಕೊಂಡೆ ಎಂದು ಕೇಳುತ್ತಾರೆ. ಆಗ ಲಾಕಪ್ ಒಳಗಿದ್ದ ಆರೋಪಿ ಹೊರಗೆ ಬರುತ್ತಾನೆ. ಒಂದು ವೇಳೆ ಖೈದಿಗಳು ಸಪೂರ ಅಥವಾ ತೆಳ್ಳಗೆ ಇದ್ರೆ ಸಲೀಸಾಗಿ ಈ ಕಂಬಿಗಳಿಂದ ಹೊರ ಬರುವ ಸಾಧ್ಯತೆಗಳಿವೆ ಎಂಬ ಸಂದೇಶವನ್ನು ಚಕನ್ ಠಾಣೆಯ ಪೊಲೀಸರು ಇತರೆ ಸ್ಟೇಶನ್‌ಗಳಿಗೆ ಸಂದೇಶ ರವಾನಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು, ಇನ್ಮುಂದೆ ಜೈಲಿನಿಂದ ಅಥವಾ ಲಾಕಪ್ ನಿಂದ ಎಸ್ಕೇಪ್ ಆಗಬೇಕಾದ್ರೆ ಡಯಟ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಪೊಲೀಸ್ ಇಲಾಖೆ ಕಂಬಿಗಳ ಮಧ್ಯದಲ್ಲಿರುವ ಅಂತರವನ್ನು ಇಳಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ.
PublicNext
23/03/2022 04:08 pm