ಮೈಸೂರು: ಹಾಲುಗಲ್ಲದ ಈ ಚೆಲುವೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದ್ದಾಳೆ. ಇಷ್ಟಾದರೂ ಇನ್ನೊಬ್ಬ ಬಾಯ್‌ಫ್ರೆಂಡ್ ಜೊತೆ ಸುತ್ತಾಡುವಾಗ ಮೂರನೇ ಗಂಡನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.
ಯೆಸ್...ಹೀಗೆ ಚೆಲುವೆಯರೇ ನಾಚುವ ಚೆಲುವೆಯಂತೆ ಕಾಣುವ ಈ ಮಿಂಚುಳ್ಳಿಯ ಹೆಸರು ನಿಧಾ ಖಾನ್. ಮೈಸೂರು ನಗರದ ಉದಯಗಿರಿ ನಿವಾಸಿಯಾದ ಈಕೆ ತನ್ನ ಐಷಾರಾಮಿ ಜೀವನಕ್ಕಾಗಿ ಮೂರು ಮೂರು ಮದುವೆ ಆಗಿದ್ದಾಳೆ.
2019ರಲ್ಲಿ ಅಜಾಮ್ ಖಾನ್ ಎಂಬುವರೊಂದಿಗೆ ಮದುವೆ ಆಗಿದ್ದ ನಿಧಾ ಖಾನ್ ಅದಾದ ಬಳಿಕವೂ ಇನ್ನೊಬ್ಬನೊಂದಿಗೆ ಲವ್ವಿ-ಡವ್ವಿ, ಚಾಟಿಂಗ್-ಡೇಟಿಂಗ್ ಅದು-ಇದು ಶುರು ಹಚ್ಚಿಕೊಂಡಿದ್ದಾಳೆ. ಈ ನಡುವೆ ಮೂರನೇ ಗಂಡ ಅಜಾಮ್ ಖಾನ್‌ಗೆ ಸಣ್ಣಗೆ, ತಣ್ಣಗೆ ಅನುಮಾನ ಶುರು ಆಗಿದೆ. ಆದ್ರೆ ತನ್ನ ಮನದನ್ನೆ ಬೇರೊಬ್ಬನ ಸೌಖ್ಯ ಬೆಳೆಸಿದ್ದಾಳೆ ಅಂತ ಆತನಿಗೆ ಪೂರ್ತಿ ಕನ್ಫರ್ಮ್ ಆಗಿರಲಿಲ್ಲ. ಆದ್ರೆ ಕೆಲದಿನಗಳ ಹಿಂದೆ ನಾಲ್ಕನೇ ನಲ್ಲನೊಂದಿಗೆ ಇದ್ದಿದ್ದನ್ನು ಕಣ್ಣಾರೆ ಕಂಡ ಮೂರನೇ ಗಂಡ ಅಜಾಮ್ ಖಾನ್, ಈ ಮಾಯದ ಮೋಸಗಾತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ. ಆಗ ಈಕೆಯ ಎಲ್ಲ ಅಸಲಿಯತ್ತು ಬಯಲಾಗಿದೆ.
ಒಟ್ನಲ್ಲಿ ಅವನಿಲ್ಲ, ಇವನಲ್ಲ, ಮೂರನೇಯವನು ಬೇಕಾಗಿಲ್ಲ ಎಂದು ನಾಲ್ಕನೇ ನಲ್ಲನೇ ನನಗೆ ಎಲ್ಲ ಎಂದು ನಲಿಯುತ್ತಿದ್ದ ನಿಧಾ ಸದ್ಯ ಪೊಲೀಸರ ವಶದಲ್ಲಿದ್ದಾಳೆ.
PublicNext
23/03/2022 03:46 pm