ಮೆಹಬೂಬ್ನಗರ: ಕಾಮುಕ ತಂದೆಯೋರ್ವ ಮಗಳ ಮೇಲೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ತೆಲಂಗಾಣದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೆಹಬೂಬ್ನಗರ ಜಿಲ್ಲೆಯ ರಮೇಶ್ ಬಂಧಿತ ಆರೋಪಿ. ಈತ ಕೂಲಿ ಕೆಲಸಕ್ಕಾಗಿ ಹೈದರಾಬಾದ್ಗೆ ಆಗಮಿಸಿ ಬೋಯಿನ್ ಪಲ್ಲಿಯಲ್ಲಿ ವಾಸವಾಗಿದ್ದ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಈತ ಬೇರೊಬ್ಬ ಮಹಿಳೆ ಜೊತೆ ಮದುವೆ ಮಾಡಿಕೊಂಡಿದ್ದ. ಆದರೆ ಈತನ ಮೊದಲ ಪತ್ನಿಗೆ ಜನಿಸಿದ್ದ ಹೆಣ್ಣು ಮಗಳು ತಂದೆ ಜೊತೆ ಉಳಿದುಕೊಂಡಿದ್ದಳು. ಕಳೆದ 15 ವರ್ಷಗಳಿಂದ ಹೈದರಾಬಾದ್ನಲ್ಲಿ ವಾಸವಾಗಿದ್ದ ಕಾಮುಕ ಮೊದಲ ಪತ್ನಿಯ ಮಗಳ ಮೇಲೆ ಅತ್ಯಾಚಾರವೆಸಗಲು ಶುರು ಮಾಡಿದ್ದ. ಇದರ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದ. ಈ ದುಷ್ಕೃತ್ಯದ ಬಗ್ಗೆ ಎರಡನೇ ಹೆಂಡತಿ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಆತನನ್ನು ಕಂಬಿ ಹಿಂದೆ ತಳ್ಳಿದ್ದಾರೆ.
ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಸದ್ಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಬೇಗಂಪೇಟ್ ಎಸಿಪಿ ನರೇಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.
PublicNext
17/03/2022 10:15 pm