ದಾವಣಗೆರೆ: ದಾವಣಗೆರೆಯ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ. ಅಧಿಕಾರಿ ಮನೆಯಲ್ಲಿ ಮಿನಿ ಜ್ಯುವೆಲ್ಲರಿ ಅಂಗಡಿಯೇ ಪತ್ತೆಯಾಗಿದೆ. ತರಹೇವಾರಿ ಆಭರಣಗಳು ಸೀಜ್ ಆಗಿದ್ದು, ಮುಕ್ಕಾಲು ಕೆಜಿ ಚಿನ್ನ, ನಾಲ್ಕು ಕೆಜಿ ಬೆಳ್ಳಿ ಮತ್ತು ಐದು ಲಕ್ಷ ನಗದು ಸಿಕ್ಕಿದೆ. ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
PublicNext
16/03/2022 06:36 pm