ಬೆಂಗಳೂರು: ಪಪ್ಪಾ ನಾನು ತುಂಬ ದಪ್ಪ ಇದ್ದೀನಿ. ಐ ಆ್ಯಮ್ ಸಾರಿ ಪಪ್ಪಾ ಎಂದು ಮಧ್ಯರಾತ್ರಿ ತಂದೆಗೆ ಮಸೇಜ್ ಕಳುಹಿಸಿದ ಪುತ್ರ ಅಪಾರ್ಟ್‌ಮೆಂಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಳ್ಳೇಗಾಲದ ಭಾವನಾ ಹಾರ್ಡ್‌ವೇರ್ ಮಾಲೀಕ ಜೆ.ಎಸ್ ರಾಮಮೋಹನ್ ಹಾಗೂ ಆರ್.ಆಶಾ ದಂಪತಿಯ ಏಕೈಕ ಪುತ್ರ ಜೆ. ಆರ್ ಅಂಜನ್(18) ಆತ್ಮಹತ್ಯೆಗೆ ಶರಣಾದ ಯುವಕ. ಬೆಂಗಳೂರಿನ ಜೈನ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದ. ಕನಕಪುರ ರಸ್ತೆಯ ಕೋಣನಕುಂಟೆಯಲ್ಲಿ ದೊಡ್ಡಪ್ಪ ಚೇತನ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬನೇ ವಾಸವಿದ್ದ. ಬೆಳಗಿನ ಜಾವ 3.30 ಕ್ಕೆ ತಂದೆಗೆ ಮೆಸೇಜ್ ಮಾಡಿದ ಅಂಜನ್ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಿಗ್ಗೆ ಮೆಸೇಜ್ ನೋಡಿದ ಪೋಷಕರು ಶಾಕ್ ಆಗಿದ್ದಾರೆ. ಮಗನಿಗೆ ಕರೆ ಮಾಡಿದಾಗ ಕರೆ ಸ್ವೀಕಾರವಾಗಿಲ್ಲ. ನಂತರ ಅಕ್ಕಪಕ್ಕದವರು ಮೃತ ಅಂಜನ್ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಆರು ಅಡಿ, ಹಾಗೂ ದಪ್ಪ ಇದ್ದ ಕಾರಣಕ್ಕೆ ಕೆಲವರು ಅಂಜನ್‌ನನ್ನು ಛೇಡಿಸುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
PublicNext
16/03/2022 05:58 pm