ಗದಗ : ಹಿಂದೂ ಯುವತಿಯನ್ನು ಪ್ರೀತಿಸಿ ಮದ್ವೆಯಾಗಿದ್ದ ಮುಸ್ಲಿಂ ವ್ಯಕ್ತಿ ಹೆಂಡತಿ ಸ್ಕೂಟಿ ಕಲೆಯಲು ಹೋದ ಗ್ರೌಂಡ್ ನಲ್ಲಿಯೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ಸ್ ಸ್ಕೂಲ್ ಗ್ರೌಂಡ್ ನಲ್ಲಿ ನಡೆದಿದೆ.
ಸದ್ಯ ಸಾವು ಬದುಕಿನ ಮಧ್ಯೆ ಪತ್ನಿ ಹೋರಾಟ ಮುಂದುವರೆದಿದೆ.ಅಪೂರ್ವ ಶಿರೂರ(26) ಅಲಿಯಾಸ್ ಅರ್ಫಾನ್ ಬಾನು ಎಂಬಾಕೆಯನ್ನು ಗಂಡ ಇಜಾಜ್ (38) ಹಲ್ಲೆ ಮಾಡಿದ್ದಾನೆ.
ಹಿಂದೂ ಯುವತಿ ಅಪೂರ್ವಳನ್ನು ಹುಬ್ಬಳ್ಳಿ ಕೋಲಪೆಟೆಯ ನಿವಾಸಿ ಇಜಾಜ್ 4 ವರ್ಷದ ಹಿಂದೆ ಮದ್ವೆಯಾಗಿದ್ದ. ಆದರೆ, ಈತನಿಗೆ ಈಗಾಗಲೇ ಬೇರೊಬ್ಬಳ ಜತೆ ಮದ್ವೆ ಆಗಿರುವ ವಿಚಾರ ಅಪೂರ್ವಾಳಿಗೆ ತಡವಾಗಿ ತಿಳಿದಿದೆ. ಇನ್ನು ಇಜಾಜ್ ನಿಂದ ಮೋಸ ಹೋಗಿರುವ ಅಪೂರ್ವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಗಂಡನಿಂದ ದೂರವಾಗಿದ್ದಳು.
ಅಪೂರ್ವ ಬಿಟ್ಟು ಹೋಗುತ್ತಿದ್ದಂತೆ ರೊಚ್ಚಿಗೆದ್ದ ಇಜಾಜ್ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಸದ್ಯ ಗಾಯಾಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
10/03/2022 10:31 pm