ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್ ಮಾಡ್ಬೇಡಿ ಎಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಗಳು ನೇಣಿಗೆ ಶರಣು

ಕೋಲಾರ: ಓದುವ ವಯಸ್ಸಿನಲ್ಲಿ ಪ್ರೀತಿ ಗಿತಿ ಬೇಡ ಚನ್ನಾಗಿ ಓದಿ ಎಂದು ಪೋಷಕರು ಬುದ್ದಿ ಹೇಳಿದಕ್ಕೆ ಪ್ರೀತಿ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೇಣಿಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ಪಟ್ಟಣದ ಪಾತಪೇಟೆ ನಿವಾಸಿಗಳಾದ ಲಿಖಿತಾ ಹಾಗೂ ಗಂಗಾಧರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಲಾರ ತಾಲೂಕಿನ ಮದ್ದೇರಿ ಪ್ರೌಢ ಶಾಲೆಯಲ್ಲಿ ಲಿಖಿತಾ9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿ ಸ್ಥಳಕ್ಕೆ ಬಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಇಬ್ಬರಿಗೂ ಪ್ರೇಮ ವ್ಯವಹಾರ ನಡೆದಿತ್ತು. ಮನೆಯವರು ನಿರಾಕರಿಸಿದ್ರು. ಪರಿಣಾಮ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸ್ಥಳೀಯ ಮಾತಾಗಿದೆ.

ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By : Nirmala Aralikatti
PublicNext

PublicNext

07/03/2022 08:42 pm

Cinque Terre

59.67 K

Cinque Terre

8

ಸಂಬಂಧಿತ ಸುದ್ದಿ