ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರ ಸಾವು!- ನಾಯಿ ದಾಳಿಗೆ ಬೆಕ್ಕು ಬಲಿ

ವಿಜಯವಾಡ: ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವೇಮುಲವಾಡ ಗ್ರಾಮದಲ್ಲಿ ನಡೆದಿದೆ.

ಎರಡು ತಿಂಗಳ ಹಿಂದೆ ವೇಮುಲಮಾಡ ಗ್ರಾಮದಲ್ಲಿ ಕಮಲಾ ಮತ್ತು ನಾಗಮಣಿ ಎಂಬುವರಿಗೆ ಬೆಕ್ಕು ಕಚ್ಚಿತ್ತು. ಆ ನಂತರ ವೈದ್ಯರ ಸಲಹೆ ಮೇರೆಗೆ ಇಬ್ಬರೂ ಟಿಟಿ ಚುಚ್ಚುಮದ್ದು ತೆಗೆದುಕೊಂಡಿದ್ದರು. ಆದರೆ ಮಾ.4 ರಂದು ಆರೋಗ್ಯ ಸಮಸ್ಯೆಯಿಂದಾಗಿ ಕಮಲಾ ಅವರನ್ನು ಮಂಗಳಗಿರಿಯ ಎನ್‌ಆರ್‌ಐ ಆಸ್ಪತ್ರೆಗೆ ಮತ್ತು ನಾಗಮಣಿ ಅವರನ್ನು ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಬ್ಬರೂ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೆಕ್ಕು ಕಚ್ಚಿದ ನಂತರ ಈ ಮಹಿಳೆಯರಿಗೆ ರೇಬಿಸ್ ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಮಹಿಳೆಯರಿಗೆ ಕಚ್ಚಿದ್ದ ಬೆಕ್ಕು ಕೂಡ ನಾಯಿ ಕಚ್ಚಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ವೇಮುಲವಾಡ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಬೆಕ್ಕು, ನಾಯಿ, ಇಲಿ, ಹಾವು ಕಚ್ಚಿದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ಶಿವರಾಮಕೃಷ್ಣ ರಾವ್ ಸಲಹೆ ನೀಡಿದ್ದಾರೆ.

Edited By : Vijay Kumar
PublicNext

PublicNext

07/03/2022 03:40 pm

Cinque Terre

26.21 K

Cinque Terre

1