ಚಂಡೀಗಢ: ಕರ್ನಾಟಕ ಮೂಲದ ಬಿಎಸ್ಎಫ್ ಯೋಧ ಭಾನುವಾರ ಬೆಳಗ್ಗೆ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ತಾನು ಗುಂಡು ಹಾರಿಸಿಕೊಂಡ ಮೃತಪಟ್ಟ ಘಟನೆ ಪಂಜಾಬನ ಅಮೃತಸರ ಸಮೀಪದ ಖಾಸಾದಲ್ಲಿರೋ ಬಿಎಸ್‌ಎಫ್ ಮುಖ್ಯ ಕಚೇರಿಯಲ್ಲಿ ನಡೆದಿದೆ.
ಗುಂಡು ಹಾರಿಸಿದ ಯೋಧನನ್ನ ಬಿಎಸ್‌ಎಫ್‌ನ 114ನೇ ಬೆಟಾಲಿಯನ್ನ ಕಾನ್‌ಸ್ಟೇಬಲ್ ಸಾತೆಪ್ಪ ಸಿದ್ದಪ್ಪ ಕಿಲಾರಿ ಎಂದು ಗುರುತಿಸಲಾಗಿದ್ದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಳೆ ವಂಟಮೂರಿ ಗ್ರಾಮದ ನಿವಾಸಿ ಆಗಿದ್ದಾರೆ. ವೈಯುಕ್ತಿಕ ಸಾಲ ಹಾಗೂ ಕುಟುಂಬ ವಿಚಾರವಾಗಿ ಮಾನಸಿಕ ಖಿನ್ನನಾಗಿದ್ದ ಎಂದು ಕುಟುಂಬದವರು ಹೇಳಿದ್ದಾರೆ.
ಗುಂಡು ಹಾರಿಸಿದ್ದ ಸಾತೆಪ್ಪ ಸೇರಿದಂತರೆ ಆತನ ಸಹದ್ಯೋಗಿಗಳಾದ ಬಿಹಾರ ಹೆಡ್ ಕಾನ್ಸ್ಟೇಬಲ್‌ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್,ಜಮ್ಮು ಮತ್ತು ಕಾಶ್ಮೀರದ ರತನ್ ಸಿಂಗ್,ಹರಿಯಾಣದ ಬಲ್ಬಿಂದರ್ ಕುಮಾರ್ ಮೃತಪಟ್ಟಿದ್ದಾರೆ.
PublicNext
07/03/2022 12:03 pm