ಮಂಡ್ಯ: ಟೆಂಪೋ ಟ್ರಾವೆಲರ್ ಒಂದು ಹೊತ್ತಿ ಉರಿದು ಭಸ್ಮಗೊಂಡ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿಯ ಗೇಟ್ ಬಳಿ ನಡೆದಿದೆ.
ಆಂಧ್ರ ಪ್ರದೇಶದಿಂದ ಗಿಡಮೂಲಿಕೆ ಮಾರಾಟ ಮಾಡಲೆಂದು ಬಂದಿದ್ದ ವಾಹನ ಬೆಂಕಿಗೆ ಆಹುತಿಯಾಗಿದೆ. ಟೆಂಪೋ ಟ್ರಾವೆಲರ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ನಾಲ್ವರು ವಾಹನದಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಟೆಂಪೋದಲ್ಲಿದ್ದ 1 ಲಕ್ಷ ರೂಪಾಯಿ ನಗದು ಬೆಂಕಿಗೆ ಆಹುತಿಯಾಗಿದೆ.
ಈ ಟೆಂಪೋ ಮಾಲೀಕರು ಗಿಡಮೂಲಿಕೆ ಮಾರಾಟ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಮಳವಳ್ಳಿ ಆಸೂ ಪಾಸಿನಲ್ಲಿ ಗಿಡಮೂಲಿಕೆ ಮಾರಾಟ ಮಾಡಿದ್ದ ನಾಲ್ವರೂ ಹಣವನ್ನು ಟೆಂಪೋ ಟ್ರಾವೆಲರ್ನಲ್ಲಿಯೇ ಇಟ್ಟಿದ್ದರು. ಬೆಂಕಿ ಕಾಣಿಸಿಕೊಂಡ ಭಯದಲ್ಲಿ ಹಣವನ್ನು ಹೊರ ತೆಗೆದುಕೊಂಡಿಲ್ಲ. ಹೀಗಾಗಿ ಹಣವೂ ಸಂಪೂರ್ಣ ಭಸ್ಮವಾಗಿದೆ.
PublicNext
02/03/2022 04:28 pm