ಆನೇಕಲ್: ಪ್ರೀತಿಸಿ ಮದುವೆಯಾಗಿ, ಮನೆಯಲ್ಲಿ ಒಪ್ಪದ ಕಾರಣಕ್ಕೆ ಪ್ರೇಮಿಗಳಿಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಸಮಂದೂರು ಗ್ರಾಮದಲ್ಲಿ ನಡೆದಿದೆ. ಮಾರನಾಯಕನಹಳ್ಳಿ ಮಣಿ ಹಾಗೂ ಕೊತ್ತಗೊಂಡನಪಲ್ಲಿ ಅನುಷಾ ಮೃತ ಪಟ್ಟವರು.
ಅಕ್ಕಪಕ್ಕದ ಊರಿನ ಇವರಿಬ್ಬರು ಕೆಲವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿದ್ದರು. ಖಾಸಗಿ ಕಂಪನಿ ಉದ್ಯೋಗಿ ಅನುಷಾ ಬೆಳ್ಳಂದೂರು ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಪ್ರೇಮಿಗಳಿಬ್ಬರು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಮನೆಗೆ ಹೋಗಿದ್ದರು. ಮಣಿಯ ಮನೆಯಲ್ಲಿ ಮದುವೆ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರಿಗೂ ಹೊಡೆದು ಮನೆಯಿಂದ ಹೊರ ಹಾಕಿದ್ದರು.
ಇದರಿಂದ ಮನನೊಂದ ಇಬ್ಬರೂ ರೈಲಿಗೆ ಸಿಲುಕಿ ಆತ್ಮಹತ್ಯೆಗೈದಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬದುಕಿ ಬಾಳಬೇಕಿದ್ದ ಪ್ರೇಮಿಗಳಿಬ್ಬರು ಆತುರದ ನಿರ್ಧಾರ ಕೈಗೊಂಡು ಮಸಣ ಸೇರಿದ್ದು ಮಾತ್ರ ವಿಪರ್ಯಾಸವೇ ಸರಿ.
PublicNext
01/03/2022 08:06 pm