ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

14 ವರ್ಷದ ಮಗಳ ಮಗಳನ್ನೇ ಕೊಂದು, ಆಕೆಯ ಶವದ ಮೇಲೆ ತಂದೆಯಿಂದ ರೇಪ್!

ಭೋಪಾಲ್: ತಂದೆಯೊಬ್ಬ ತಾನೇ ಕೈ ತುತ್ತಿಟ್ಟು ಬೆಳೆಸಿದ ಮಗಳನ್ನ ಕೊಂದು ಆಕೆಯ ಶವದ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಹಾಗೂ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತ ಪೈಶಾಚಿಕ ಘಟನೆ ಮಧ್ಯ ಪ್ರದೇಶದ ಗುನಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಬಜರಂಗಗಡ ಪೊಲೀಸ್ ಠಾಣೆ ವ್ಯಾಪ್ತಿಯ ಜೈತಾ ಡೊಂಗರ್ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಲ್ಲಿನ ನಿವಾಸಿಯಾಗಿರುವ 40 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿಕಲಚೇತನನಾಗಿದ್ದು, ತನ್ನ 14 ವರ್ಷದ ಮಗಳನ್ನು ಕೊಂದು ಬಳಿಕ ಆಕೆಯ ಶವದ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಕಳೆದ 2 ದಿನಗಳ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದ ಈ ಪಾಪಿ ತಂದೆ, ತನ್ನ ಮಗಳು ಮನೆಯಿಂದ ಕಾಣೆಯಾಗಿದ್ದಾಳೆ. ಆಕೆಯನ್ನು ಹುಡುಕಿಕೊಡಿ ಅಂತ ದೂರು ಕೊಟ್ಟಿದ್ದಾನೆ. ದೂರು ಸ್ವೀಕರಿಸಿದ ಪೊಲೀಸರು ಬಾಲಕಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ಬಾಲಕಿಯ ಗ್ರಾಮದ ಹತ್ತಿರದ ಅರಣ್ಯದಲ್ಲಿ ಬಿದ್ದಿರುವುದು ತಿಳಿಯುತ್ತದೆ. ಪೋರ್ಸ್ಟ್ ಮಾರ್ಟಮ್ ಮಾಡಿದಾಗ ರೇಪ್ ಆಗಿರುವುದು ಗೊತ್ತಾಗುತ್ತದೆ. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮನೆಯವರನ್ನೆಲ್ಲ ವಿಚಾರಿಸುತ್ತಾರೆ. ಆಗ ಕಾಣೆಯಾಗೋ ಹಿಂದಿನ ದಿನ ಮಗಳ ಜೊತೆ ಅಪ್ಪ ತೆರಳಿದ್ದ ಬಗ್ಗೆ ಅಕ್ಕಪಕ್ಕದ ಜನರು ಮಾಹಿತಿ ನೀಡುತ್ತಾರೆ.

ಈ ಎಲ್ಲಾ ಹೇಳಿಕೆಗಳಿಂದ ತಂದೆ ಮೇಲೆಯೇ ಪೊಲೀಸರಿಗೆ ಅನುಮಾನ ಬರುತ್ತದೆ. ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಮನೆಯಲ್ಲಿ ಬೇರೆ ಸದಸ್ಯರಿದ್ದು, ಅತ್ಯಾಚಾರ ಮಾಡುವ ಉದ್ದೇಶದಿಂದಲೇ ಅರಣ್ಯಕ್ಕೆ ಕರೆದೊಯ್ದೆ. ಆದರೆ ಆಕೆ ಅಲ್ಲಿಂದ ತಪ್ಪಿಸಿಕೊಂಡು, ಮನೆಯವರಿಗೆ ಹೇಳುವುದಾಗಿ ಬೆದರಿಸಿದಳು. ಆಗ ಏನು ಮಾಡಲೂ ತೋಚದೆ ಮಗಳನ್ನು ಕೊಂದೆ. ಬಳಿಕ ಆಕೆಯ ಶವದ ಮೇಲೆ ರೇಪ್ ಮಾಡಿದೆ ಎಂದು ಹೇಳಿದ್ದಾನೆ.

Edited By : Vijay Kumar
PublicNext

PublicNext

24/02/2022 08:01 am

Cinque Terre

29.99 K

Cinque Terre

4