ತಿರುವನಂತಪುರಂ: ಲೈಂಗಿಕ ದೌರ್ಜನ್ಯ ಎಸಗಲು ಬಂದನೆಂಬ ಕಾರಣಕ್ಕೆ ಕಾನೂನು ವಿದ್ಯಾರ್ಥಿನಿಯೊಬ್ಬರು ಸ್ವಾಮೀಜಿಯೊಬ್ಬರ ಮರ್ಮಾಂಗ ಕತ್ತರಿಸಿದ್ದರು. 2017ರಲ್ಲಿ ಈ ಘಟನೆ ನಡೆದಿತ್ತು. ಈ ಕೇಸ್‌ಗೆ ಈಗ ಮಹತ್ತರ ತಿರುವು ಸಿಕ್ಕಿದೆ.
ತಿರುವನಂತಪುರಂ ನಗರದ 23 ವರ್ಷದ ಕಾನೂನು ವಿದ್ಯಾರ್ಥಿನಿ, ತನ್ನ ಮೇಲೆ ಸ್ವಾಮಿ ಗಣೇಶಾನಂದರು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದಾಗ ಅವರ ಮರ್ಮಾಂಗ ಕತ್ತರಿಸಿದ್ದಾಗಿ ಹೇಳಿದ್ದಳು. ಘಟನೆಯ ಬಗ್ಗೆ ತನಿಖೆ ನಡೆದ ವೇಳೆ ವಿದ್ಯಾರ್ಥಿನಿ ಉಲ್ಟಾ ಹೊಡೆದಿದ್ದಾಳೆ. ಸ್ವಾಮೀಜಿ ತನ್ನ ಮೇಲೆ ರೇಪ್ ಮಾಡಲು ಬಂದಿರಲಿಲ್ಲ. ಅವರ ಮಾಜಿ ಸಹೋದ್ಯೋಗಿ ಅಯ್ಯಪ್ಪದಾಸ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಳು.
ಇನ್ನು ಈ ಕಡೆ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸ್ವಾಮೀಜಿ ಕೂಡ ದೂರು ನೀಡಿದ್ದರು. ಈ ಎಲ್ಲ ಕಾರಣಗಳಿಗಾಗಿ ಅಪರಾಧ ತನಿಖಾ ದಳವು 2020ರ ಮೇ ತಿಂಗಳಲ್ಲಿ ಘಟನೆ ಬಗ್ಗೆ ಮರು ತನಿಖೆ ನಡೆಸಲು ಆದೇಶಿಸಿತ್ತು.
ನಂತರ ತಿಳಿದುಬಂದಿರುವ ಸತ್ಯವೇ ರೋಚಕವಾಗಿದೆ. ಯುವತಿ ಅಯ್ಯಪ್ಪದಾಸ್ ಎಂಬಾತನನ್ನು ಲವ್ ಮಾಡುತ್ತಿದ್ದಳು. ಇದಕ್ಕೆ ಗಣೇಶಾನಂದ ಸ್ವಾಮೀಜಿಯ ವಿರೋಧವಿತ್ತು. ತಮ್ಮ ಮದುವೆಗೆ ಸ್ವಾಮೀಜಿ ಅಡ್ಡಿಪಡಿಸುತ್ತಾರೆ ಎಂದುಕೊಂಡು ಇಬ್ಬರೂ ಸೇರಿ ಸ್ವಾಮೀಜಿ ಮೇಲೆ ಹಲ್ಲೆ ಮಾಡಲು ಪ್ಲ್ಯಾನ್ ಮಾಡಿದ್ದರು. ಹಾಗೂ ಜನನಾಂಗವನ್ನು ಹೇಗೆ ಕತ್ತರಿಸಬೇಕೆಂಬ ಬಗ್ಗೆ ಗೂಗಲ್ ಸರ್ಚ್ ಕೂಡ ಮಾಡಿದ್ದರು ಎಂಬುದು ತಿಳಿದುಬಂದಿದೆ.
ಮೊದಲ ಬಾರಿ ದೂರು ದಾಖಲಾದಾಗ ಸಂತ್ರಸ್ತೆ ತಾನು ಅಪ್ರಾಪ್ತೆ ಎಂದು ಹೇಳಿಕೊಂಡಿದ್ದಳು. ಹೀಗಾಗಿ ತನಿಖೆಯ ಹಾದಿ ಬದಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
22/02/2022 06:04 pm