ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಮಿಗಳ ದಿನದಂದೇ ಪತಿಗೆ ನಡುರಸ್ತೆಯಲ್ಲೇ ಥಳಿಸಿ ಪೊಲೀಸ್‌ ಠಾಣೆಗೆ ಎಳೆದೊಯ್ದ ಪತ್ನಿ.!

ಭೋಪಾಲ್: ಪ್ರೇಮಿಗಳ ದಿನದಂದೇ ಮಹಿಳೆಯೊಬ್ಬಳು ತನ್ನ ಪತಿಗೆ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಥಳಿಸಿ ಪೊಲೀಸ್‌ ಠಾಣೆಗೆ ಎಳೆದೊಯ್ದ ಘಟನೆ ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯಲ್ಲಿ ನಡೆದಿದೆ.

ಟಿಕಮ್‌ಗಢ್ ಜಿಲ್ಲೆಯ ಕೊಟ್ವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಸ್ಮಾ ತನ್ನ ಪತಿ ಸಂತೋಷ್ ಚೌರಾಸಿಯಾ ಹಲ್ಲೆ ಮಾಡಿದ್ದಾಳೆ. ಸಂತೋಷ್ ದಂಪತಿ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಆದರೆ ಮದ್ಯ ವ್ಯಸನಿಯಾಗಿದ್ದ ಉಸ್ಮಾ ಫೆಬ್ರವರಿ 13 ಮನೆಗೆ ಬೀಗ ಹಾಕಿ ಯುವಕರ ಜೊತೆಗೆ ಊರು ಸುತ್ತಲು ಹೋಗಿದ್ದಳು. ಕ್ಯಾಬ್ ಚಾಲಕನಾಗಿರುವ ಸಂತೋಷ್ ಮನೆಗೆ ಬಂದಾಗ ಪತ್ನಿ ಮನೆಯಲ್ಲಿ ಇರಲಿಲ್ಲ.

ಪತ್ನಿ ಹೀಗೆ ಮನೆ ಬಿಟ್ಟು ಯುವಕರ ಜೊತೆಗೆ ಊರು ಸುತ್ತಲು ಹೋಗುತ್ತಿದ್ದದ್ದು ಇದೇ ಮೊದಲೇನಲ್ಲ. ಆಕೆಯ ಈ ನಡತೆಯಿಂದ ವಿಚಲಿತಗೊಂಡ ಸಂತೋಷ್ ಆಕೆಯ ವಿರುದ್ಧ ಕೊಟ್ವಾಡ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಉಸ್ಮಾ ಫೆ.14ರಂದು ಮದ್ಯದ ಅಮಲಿನಲ್ಲಿ ಸಾರ್ವಜನಿಕರ ಎದುರೇ ಗಂಡನಿಗೆ ಥಳಿಸಿದ್ದಾಳೆ. ಸಂತೋಷ್ ಎಷ್ಟೇ ಕೇಳಿಕೊಂಡರೂ ಕ್ಯಾರೇ ಎನ್ನದೆ ಆತನ ಕಾಲರ್ ಹಿಡಿದು ಎಳೆದುಕೊಂಡು ಪೊಲೀಸ್‌ ಠಾಣೆಗೆ ಹೋಗಿದ್ದಾಳೆ. ಈ ಘಟನೆ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Edited By : Manjunath H D
PublicNext

PublicNext

18/02/2022 11:13 am

Cinque Terre

52.6 K

Cinque Terre

4