ಭೋಪಾಲ್: ಕಿಲಾಡಿ ಕಳ್ಳನೋರ್ವ ಮದುವೆ ಮನೆಯಲ್ಲಿ ಕೈಚಳಕ ತೋರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು, ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮದುವೆ ಹಾಲ್‌ಗೆ ಬಂದಿದ್ದ ಕಳ್ಳ ವಧು-ವರರಿದ್ದ ವೇದಿಕೆ ಮೇಲೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾನೆ. ಬಳಿಕ ವಧು-ವರರು ಕುಳಿತಿದ್ದ ರಾಜಾರಾಣಿ ಚೇರ್ ಹಿಂದೆ ಇಟ್ಟಿದ್ದ ಬ್ಯಾಗ್ ಅನ್ನು ಎಗಸಿ ಪರಾರಿಯಾಗಿದ್ದಾನೆ. ಬ್ಯಾಗ್‌ನಲ್ಲಿ 1 ಲಕ್ಷ ರೂ. ನಗದು ಹಾಗೂ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದವು ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ವಾಲಿಯರ್ ಪೊಲೀಸರು ಕಳ್ಳನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
PublicNext
14/02/2022 01:53 pm