ರಾಮನಗರ: ರಾಮನಗರ ಪೊಲೀಸ್ರ ನಿದ್ದೆಕಡೆಸಿದ್ದ ಈಗಲ್ಟನ್ ರೆಸಾರ್ಟ್ ನ ಜೋಡಿ ಕೊಲೆ ಕೇಸ್ ಬೆನ್ನಟ್ಟಿದ್ದ ಪೊಲೀಸ್ರು ಕೊನೆಗೂ ಕಿಲ್ಲರ್ ನನ್ನ ಟ್ರೇಸ್ ಮಾಡಿ ಹಿಡಿದು ಹಾಕಿದ್ದಾರೆ.
ಈಗಲ್ಟನ್ ಸಾರ್ಟ್ ನ C ಬ್ಲಾಕ್ ನಲ್ಲಿ 70 ವರ್ಷ ವಯಸ್ಸಿನ ರಘುರಾಜನ್, 63 ವರ್ಷದ ಆಶಾ ದಂಪತಿ ಕೊಲೆ ಪ್ರಕರಣವನ್ನು ಬಿಡದಿ ಇನ್ಸ್ಪೆಕ್ಟರ್ ಪ್ರಕಾಶ್ ಅಂಡ್ ಟೀಂ ಕೊನೆಗೂ ಪತ್ತೆ ಹಚ್ಚಿದೆ. ವೃದ್ಧ ದಂಪತಿ ಹಣ ದೋಚಲು ಪ್ಲಾನ್ ಮಾಡಿದ್ದ ಮನೆ ಕೆಲಸಗಾರನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.
ಜೋಗಿಂದರ್ ಕುಮಾರ್ ಯಾದವ್ ಕೊಲೆ ಮಾಡಿರುವ ಆರೋಪಿಯಾಗಿದ್ದು, ಮತ್ತೊಬ್ಬ ರವೀಂದ್ರ ಯಾದವ್ ಎಸ್ಕೇಪ್ ಆಗಿದ್ದಾನೆ. ಈತ ಇವನ ಸಂಬಂಧಿಕ ಎನ್ನಲಾಗಿದೆ. ಇನ್ನೂ ಕೊಲೆ ಮಾಡಿ ಮಧ್ಯರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ
ಆರೋಪಿ ಬಿಡದಿಯ ಕೇತಗಾನಹಳ್ಳಿ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 56 ಸಾವಿರ ರೂಪಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಹಿಡಿಯಲು ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.
ಜೋಡಿ ಕೊಲೆ ಆಗಿದ್ದು ಹೇಗೆ ಗೊತ್ತೇ ?
ಇನ್ನು ಹಣಕ್ಕಾಗಿ ಮೊದಲು ರಘುರಾಮ್ ನ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡೋ ಆರೋಪಿಗಳು, ರಕ್ತ ಕಂಡು ವಾಂತಿ ಮಾಡಿಕೊಂಡು ತಲೆ ಸುತ್ತಿ ಬೀಳ್ತಾರೆ. ಸುಧಾರಿಸಿಕೊಳ್ಳಲು ಅಲ್ಲೆ ಇದ್ದ ವಿಸ್ಕಿ ತೆಗೆದುಕೊಂಡು ರಾತ್ರಿಯಿಡಿ ಎಣ್ಣೆ ಹಾಕಿ ಮುಂಜಾನೆ ರಘುರಾಮ್ ಪತ್ನಿ ಆಶಾಳನ್ನು ಕೊಲೆ ಮಾಡಿ ಎಸ್ಕೇಪ್ ಆಗ್ತಾರೆ. ಚಿನ್ನಾಭರಣ ಲಾಕ್ ಆಗಿದ್ದರಿಂದ, ಜೇಬಲ್ಲಿದ್ದ 50 ಸಾವಿರ ಹಣ ಮಾತ್ರ ಕದ್ದು ಅಲ್ಲಿಂದ ಎಸ್ಕೇಪ್ ಆಗಿದ್ದರು ಈ ಕೊಲೆಗಡುಕರು.
ಕೊಲೆಯಾದ ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಬಿಡದಿ ಬೈಪಾಸ್ ನಲ್ಲಿ ಹೋಗುವಾಗ ಪೊಲೀಸ್ರಿಗೆ ಲಾಕ್ ಆಗಿದ್ದಾರೆ.ಒಟ್ಟಿನಲ್ಲಿ ಕಷ್ಟ ಅಂತಕೆಲಸಕ್ಕೆ ಬಂದು ನಗನಾಣ್ಯಕ್ಕೆ ಆಸೆ ಬಿದ್ದು ವೃದ್ಧ ದಂಪತಿಯನ್ನೆ ಮಸಣಕ್ಕೆ ಸೇರಿಸಿದ್ದು ದುರಂತವೇ ಸರಿ..
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
12/02/2022 10:09 pm