ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಪ್ರಕರಣಗಳು ಆಗಾಗ ಕೇಳಿ ಬರುತ್ತಿದ್ದು ಬಡವರು ಹೊಟ್ಟೆ ಸೇರಬೇಕಾದ ಸರಕಾರದ ಧಾನ್ಯ ಕದ್ದು ಮಾರುವವರ ಪಾಲಾಗುತ್ತಿದೆ. ಇಂದು ಶನಿವಾರ ಅಕ್ಕಿ ಕಳ್ಳ ಸಾಗಾಣಿಕೆ ಆಗುತ್ತಿದ್ದ ವೇಳೆ ಗೋಗಿ ಪೊಲೀಸರು ದಾಳಿ ಖದೀಮರನ್ನು ಖೆಡ್ಡಾಗೆ ಕೆಡವಿದ್ದಾರೆ.
ಭಿಗುಡಿಯಿಂದ ಚಾಮನಾಳ ಕಡೆಗೆ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡುವ ಅಕ್ಕಿಯನ್ನು ಅಕ್ರಮವಾಗಿ ರಾಜಸ್ಥಾನಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗೋಗಿ ಪಿಎಸ್ಐ ಹಾಗೂ ಸಿಬ್ಬಂದಿ ಮತ್ತು ಶಹಾಪುರ ಆಹಾರ ನಿರೀಕ್ಷಕ ವಿಜಯರೆಡ್ಡಿ ಸೇರಿ ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ GJ 36 V 7633 ಸಂಖ್ಯೆಯ ಲಾರಿಯನ್ನು ಹಿಡಿದು ಅದರಲ್ಲಿದ್ದ 8,36000 ಲಕ್ಷ ರೂಪಾಯಿ ಮೌಲ್ಯದ ಒಟ್ಟು 50 ಕೆಜಿಯ 760 ಪಾಕೆಟ್ ಅಕ್ಕಿ ಚೀಲಗಳು ಜಪ್ತಿ ಮಾಡಲಾಗಿದೆ. ಹಾಗೂ ರಾಜಸ್ಥಾನದ ಲಾರಿ ಚಾಲಕ ರಾಮ್ ಪ್ರಸಾದ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-----
ವರದಿ: ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
12/02/2022 10:03 pm