ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿಯಲ್ಲಿ ರೈಲ್ವೆ ಹಳಿಗೆ ತಲೆಕೊಟ್ಟು ಶಿಕ್ಷಕ ಸಾವು..!

ಯಾದಗಿರಿ: ಆತ ಶಿಕ್ಷಕ ವೃತ್ತಿ ಜೊತೆ ಕಲೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಆದರೆ, ಸಾಧಕ ಶಿಕ್ಷಕ ಈಗ ಮುಖ್ಯ ಶಿಕ್ಷಕಿಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಾದಗಿರಿ ನಗರದ ಸರಕಾರಿ ಡಿಗ್ರಿ ಕಾಲೇಜ್ ಸಮೀಪದ ರೈಲ್ವೆ ಹಳಿಗೆ ತಲೆಕೊಟ್ಟು ಶಿಕ್ಷಕ ಸುಸೈಡ್ ಮಾಡಿಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ನಿವಾಸಿ ಶಿಕ್ಷಕ ಸಂಗನಬಸಯ್ಯ ಕೊಡೇಕಲ್ ಮಠ ಅವರು ಕಳೆದ 15 ವರ್ಷದಿಂದ ನಗರದಲ್ಲಿ ವಾಸವಾಗಿದ್ದು,ಲಿಂಗೇರಿ ಕೋನಪ್ಪ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು.

ಶಿಕ್ಷಕ ಸಂಗನಬಸಯ್ಯ ಅವರು ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ಮುಖ್ಯ ಶಿಕ್ಷಕಿ ಮಲ್ಲಮ್ಮ ಬಿರಾದರ್ ಅವರು, ಶಿಕ್ಷಕನ ಸಾಧನೆ ಸಹಿಸದೇ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಹೇಳಾಲಾಗ್ತಿದೆ.

ಇದರಿಂದ ನೊಂದ ಶಿಕ್ಷಕ ಸಂಗನಬಸಯ್ಯ ನಿನ್ನೆ ಸಂಜೆ ಮನೆಯಿಂದ ಹೋಗಿ ಡೇತ್ ನೋಟ್ ಬರೆದಿಟ್ಟು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಖ್ಯ ಶಿಕ್ಷಕಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಶಿಕ್ಷಕ ಸಂಗನಬಸಯ್ಯ ಹಲವಾರು ಪುಸ್ತಕಗಳನ್ನು ಬರೆಯುವ ಜೊತೆ ತಬಲಾ ಬಾರಿಸುವ ಕಲೆ,ಹಾಡು ಹಾಡುವ ಕಲೆ ಕರಗತ ಮಾಡಿಕೊಂಡು ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಶಿಕ್ಷಕರಾಗಿದ್ದರು. ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು,ಸ್ಥಳಕ್ಕೆ ರಾಯಚೂರು ವಲಯದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

-ಮೌನೇಶ ಬಿ. ಮಂಗಿ ಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Shivu K
PublicNext

PublicNext

11/02/2022 11:53 am

Cinque Terre

214.19 K

Cinque Terre

4

ಸಂಬಂಧಿತ ಸುದ್ದಿ