ಬೆಳಗಾವಿ:ಇಲ್ಲಿಯ ಹಿಂಡಲಗಾ ಜೈಲಿನಲ್ಲಿಯ ಕೈದಿಯೊಬ್ಬನ ಸಾವಾಗಿದೆ. ಕೇರಳದ ಕುಖ್ಯಾತ ರೌಡಿ ತಸ್ಲಮ್ ಕೊಲೆ ಪ್ರಕರಣದ ಆರೋಪಿ ಗುರುರಾಜ್ ದೊಡ್ಡಮನಿ ಅಂದರ್ ಆಗಿದ್ದ. ಅದೇ ಗುರುರಾಜ್ ಈಗ ಅನುಮಾನಾಸ್ಪದವಾಗಿಯೇ ಮೃತಪಟ್ಟಿದ್ದಾನೆ.
ಕಳೆದ 15 ದಿನಗಳ ಹಿಂದೆ ಗುರುರಾಜ್ ದೊಡ್ಡಮನಿ ಮೇಲೆ ಜೈಲಿನಲ್ಲಿಯೇ ಹಲ್ಲೆ ನಡೆದಿತ್ತು. ಹಲ್ಲೆ ಬಳಿಕ ಎದೆನೋವಿನಿಂದಲೇ ಗುರುರಾಜ್ ಬಳಲುತ್ತಿದ್ದ. ಈ ಬಗ್ಗೆ ಸಂಬಂಧಿಯೊಬ್ಬರಿಗೆ ಗುರುರಾಜ್ ಎದೆನೋವು ಹಾಗೂ ಹಲ್ಲೆ ಕುರಿತು ಪೋನ್ ನಲ್ಲಿಯೇ ತಿಳಿಸಿದ್ದ.
ಇದಾದ ಕೆಲ ಹೊತ್ತಿನಲ್ಲಿಯೇ ಗುರುರಾಜ್ ಮೃತಪಟ್ಟಿದ್ದಾನೆ ಎಂದು ಜೈಲು ಸಿಬ್ಬಂದಿ ಗುರುರಾಜ್ ಸಂಬಂಧಿಗೆ ಕೆರೆ ಮಾಡಿ ತಿಳಿಸಿದ್ದಾರೆ.
ಜೈಲು ಸಿಬ್ಬಂದಿ ಗುರುರಾಜ್ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಮಾಡಿಯೇ ಇಲ್ಲ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
PublicNext
05/02/2022 09:43 pm