ಗದಗ: ವ್ಯಕ್ತಿಯೋರ್ವ ತನ್ನ ಪತ್ನಿ ಶೀಲ ಶಂಕಿಸಿ ಆಕೆಯನ್ನು ಸಲಿಕೆಯಿಂದ ಕೊಚ್ಚಿ ಕೊಲೆಗೈದ ಅಮಾನವೀಯ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮವ್ವ ತಿಪ್ಪಣ್ಣ ಚೋಳಮ್ಮನವರ್ (35) ಕೊಲೆಯಾದ ಮಹಿಳೆ. ತಿಪ್ಪಣ್ಣ ಚೋಳಮ್ಮನವರ್ ಕೊಲೆಗೈದ ಪತಿ. ತಿಮ್ಮಣ್ಣ ತನ್ನ ಲಕ್ಷ್ಮವ್ವನ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಇದೇ ವಿಚಾರಕ್ಕೆ ನಿನ್ನೆ (ಶುಕ್ರವಾರ) ತಿಪ್ಪಣ್ಣ ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಕೋಪಗೊಂಡ ತಿಪ್ಪಣ್ಣ ಪತ್ನಿಯ ಮೇಲೆ ಸಲಿಕೆಯಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
05/02/2022 12:20 pm