ಯಾದಗಿರಿ: ಅಬ್ಬಬ್ಬಾ..ಏನ್ ಐನಾತಿ ಕಳ್ಳ ಗುರೂ ಇವನು..ಅಂಗಡಿ ಶಟರ್ ಮುರಿದು ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಎಗರಿಸಿ ಪರಾರಿಯಾಗಿರೋ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ.
ತೆಂಗಿನ ಕಾಯಿ ವ್ಯಾಪಾರಿ ಶಿವಶರಣಪ್ಪ ಗೊಳಗೇರಿ ಇವರ ಅಂಗಡಿಯಲ್ಲಿ ನಿನ್ನೆ ರಾತ್ರಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಅಂಗಡಿಯ ಶಟರ್ ಮುರಿದಿದ್ದು,ಅಂಗಡಿಯಲ್ಲಿದ್ದ 4,60000 ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.
ಇನ್ನು ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿನ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕರೆ ಶಹಾಪುರ ನಗರ ಠಾಣೆಗೆ ಮಾಹಿತಿ ನೀಡಲು ಯಾದಗಿರಿ ಎಸ್ಪಿ ಡಾ. ಸಿ.ಬಿ ವೇದಮೂರ್ತಿ ಅವರು ಕೋರಿದ್ದಾರೆ.
ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದು, ಸಾರ್ವಜನಿಕರು ಹೆಚ್ಚಿನ ಮೊತ್ತದ ಹಣವಿದ್ದಾಗ ಜಾಗ್ರತೆ ವಹಿಸಬೇಕು. ಅಲ್ಲದೇ ಅಂಗಡಿ ಹೊರಗಡೆ ಹಾಗೂ ಒಳಗಡೆ ಸಿಸಿಟಿವಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮೌನೇಶ ಬಿ. ಮಂಗಿಹಾಳ
ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
04/02/2022 07:34 pm