ತುಮಕೂರು:ಕನ್ನಡ ಚಿತ್ರರಂಗದ ದಿಗ್ಗಜರು ಚಿತ್ರ ವಿಶೇಷವಾಗಿಯೇ ಇದೆ. ಇದೇ ಚಿತ್ರದಲ್ಲಿ ಕಾರ್ ಖರೀದಿಸುವ ಸೀನ್ ಕೂಡ ಇದೆ. ಹಳ್ಳಿ ಗಮಾರನಂತೆ ಬರೋ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರಿಗೆ ಹೇಗೆ ಶೋ ರೂಮ್ ನವರು ಅವಮಾನ ಮಾಡುತ್ತಾರೋ ಅದೇ ರೀತಿನೇ ಈಗೊಂದು ಘಟನೆ ನಡೆದಿದೆ. ಬನ್ನಿ, ಹೇಳ್ತೀವಿ ಈ ರಿಯಲ್ ಸ್ಟೋರಿ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಮತ್ತು ಸ್ನೇಹಿತರು ಮಹೀಂದ್ರಾ ಶೋ ರೂಮ್‌ಗೆ ಹೋಗಿದ್ದರು. ಗುಬ್ಬಿ ಗೇಟ್ ಬಳಿಯ ಈ ಶೋರೂಂಗೆ ಬಂದ ಇವರ ಭಾಷೆ ಮತ್ತು ಶೈಲಿ ನೋಡಿ ಇಲ್ಲಿಯ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. 10 ರೂಪಾಯಿ ಯೋಗ್ಯತೆ ಇಲ್ಲ. ಕಾರ್ ಖರೀದಿಗೆ ಬರ್ತೀರಾ ಅಂತಲೇ ಬೈದು ಹಾಕಿದ್ದಾರೆ.
ಅಷ್ಟೇ ನೋಡಿ,ಕೆಂಪೇಗೌಡ ರಾಂಗ್ ಆಗಿ ಹೋಗಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿಯೇ 10 ಲಕ್ಷ ತಂದು ಶೋರೂಂ ಸಿಬ್ಬಂದಿ ಮುಂದೆ ಸುರುವಿದ್ದಾರೆ. ಅಲ್ಲಿಗೆ ಸಿಬ್ಬಂದಿ ಕಕ್ಕಾ ಬಿಕ್ಕಿ-ಈಗಲೇ ಕೊಡಪ್ಪ ಕಾರು ಅಂತಲೇ ಕೆಂಪೇಗೌಡ ಹಠಕ್ಕೆ ಬಿದ್ದಿದ್ದಾರೆ.
ಆದರೆ ಕಾರ್ ಕೊಡೋಕೆ ಹೇಗೆ ಸಾಧ್ಯ.ದಿಗ್ಗಜರು ಒಂದು ಸಿನಿಮಾ. ಇಲ್ಲಿ ದುಡ್ಡು ಸುರುವಿದ ಕೂಡಲೇ ಕಾರ್ ಬಂದು ಬಿಡ್ತು.ಇಲ್ಲಿ ಹೇಗೆ ಸಾಧ್ಯ ಆಗುತ್ತದೆ. ಶೋರೂಂ ನವರು ಒಂದೆರಡು ದಿನ ಟೈಮ್ ಕೊಡಿ ಅಂತಲೇ ಕೇಳಿದ್ದಾರೆ. ಅದಕ್ಕೊಪ್ಪದ ಕೆಂಪೇಗೌಡರು ಸಿಬ್ಬಂದಿಯನ್ನ ಬಿಟ್ಟೇಯಿಲ್ಲ. ಆಗಲೇ ಈ ಘಟನೆಗೆ ತುಮಕೂರು ತಿಲಕ್ ಪಾರ್ಕ್ ನ ಪೊಲೀಸ್ ರ ಎಂಟ್ರಿ ಆಗಿದೆ.
ಕೆಂಪೇಗೌಡರ ಬಳಿ ತಪ್ಪಾಯಿತು ಅಂತಲೇ ಸಿಬ್ಬಂದಿ ಮುಚ್ಚಳಿಕೆ ಬರೆದು ಕೊಟ್ಟ ಮೇಲೆನೆ ಈ ಕೇಸ್‌ಗೆ ಹ್ಯಾಪಿ ಎಂಡಿಂಗ್ ಆಗಿದೆ.
PublicNext
23/01/2022 09:37 pm