ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಹಣ್ಣಕ್ಕಾಗಿ ಖೆಡ್ಡ ತೋಡುತ್ತಿದ್ದ ಖದೀಮರ ಕುಟುಂಬ ಅರೆಸ್ಟ್

ಆನೇಕಲ್ : ತಮ್ಮ ಪರಿಚಯಸ್ಥರ ಮನೆಯಲ್ಲಿ ಒಡವೆಗಳನ್ನು ಅಡವಿಟ್ಟು ಕಳ್ಳತನ ಆರೋಪ ಹೊರಿಸಿ ಸುಲಭ ರೀತಿಯಲ್ಲಿ ಹಣ ಮಾಡುತ್ತಿದ್ದ ಗ್ಯಾಂಗ್‌ಅನ್ನ ಸರ್ಜಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಬಂಧಿತ ಆರೋಪಿಗಳಿಂದ 25 ಲಕ್ಷ ಮೌಲ್ಯದ ಚಿನ್ನಾಭರಣ ಬೆಳ್ಳಿ ನಗದು ವಶಪಡಿಸಿಕೊಳ್ಳಲಾಗಿದೆ.

ಹಣಕ್ಕಾಗಿ ಕುಟುಂಬವೇ ಕಳ್ಳರಾದ ಇಂಟರೆಸ್ಟಿಂಗ್ ಸ್ಟೋರಿ ಇದು. ತಮ್ಮ ಬಳಿ ಇರುವ ಎಲ್ಲಾ ಚಿನ್ನಾಭರಣವನ್ನು ಪರಿಚಿತನೊಬ್ಬನ ಮೂಲಕ ಗಿರವಿ ಇಟ್ಟು ಹಣ ಪಡೆದುಕೊಳ್ಳುವುದು. ಬಳಿಕ ಒಡವೆಗಳು ಕಳುವಾಗಿದೆ ಎಂದು ದೂರು ನೀಡುವುದು. ನಾವು ದೇವಸ್ಥಾನಕ್ಕೆ ಹೊರ ಹೋಗಿದ್ದಾಗ ಈ ವೇಳೆ ಒಡವೆ ಕಳ್ಳತನವಾಗಿದೆ ಅಂತಲೇ ಪೊಲೀಸರಿಗೆ ದೂರ ನೀಡೋದು. ಅದೇ ರೀತಿ ಇವರಲ್ಲಿ ಒಬ್ಬನಾದ ರವಿ ಪ್ರಕಾಶ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಎಲ್ಲಾ ಆಯಾಮಗಳ ತನಿಖೆ ನಡೆಸಿದ ನಂತರ ಕೊನೆಗೆ ಮನೆಯವರ ಮೇಲೆ ಸಂಶಯ ವ್ಯಕ್ತಪಡಿಸಿ ತನಿಖೆಗಿಳಿದಾಗ ಸ್ಫೋಟಕ ಸತ್ಯ ಬಯಲಾಗಿತ್ತು.

ಆರೋಪಿಗಳು ಈ ಹಿಂದೆ ಸಹ ಯಶವಂತಪುರ ಸೇರಿದಂತೆ ಎರಡು ಪೊಲೀಸ್ ಠಾಣೆಯಲ್ಲಿ ಇದೇ ರೀತಿ ಒಡವೆ ಕಳವು ಪ್ರಕರಣ ದಾಖಲು ಮಾಡಿ ಒಡವೆ ಪಡೆದುಕೊಂಡಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಇಡೀ ಮನೆ ಮಂದಿಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಅಸಲಿ ಕಹಾನಿ ಬಯಲಾಗಿದೆ.

ಕುಟುಂಬದದ ಯಜಮಾನ ರವಿ ಪ್ರಕಾಶ್ , ಮಗ ಮಿಥುನ್ ಕುಮಾರ್, ಆತನ ಹೆಂಡತಿ ಸಂಗೀತಾ, ತಂಗಿ ಆಶಾ ಮತ್ತು ಆಕೆಯ ಗಂಡ ಚರಣ್ ಹಾಗೂ ಮಿಥುನ್ ಕುಮಾರ್ ಪ್ರಯತಮೆ ಅಸ್ಮಾ ಹಾಗೂ ಸ್ನೇಹಿತ ದೀಪಕ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Edited By :
PublicNext

PublicNext

23/01/2022 07:42 pm

Cinque Terre

60.04 K

Cinque Terre

1