ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ತಂತಿ ಬೇಲಿ ತಗುಲಿ ಆನೆ ಸಾವು

ಚಾಮರಾಜನಗರ: ವಿದ್ಯುತ್ ತಂತಿ ತಗುಲಿ 20 ವರ್ಷದ ಗಂಡಾನೆ, ಮಹದೇವಪ್ಪ ಎಂಬುವವರ ಜಮೀನಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗೌಡಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಸರ್ವೇ ನಂಬರ್ 310 ರಲ್ಲಿ 3 ಎಕರೆ ಕಬ್ಬಿನ ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ಸೋಲಾರ್ ಬೇಲಿಗೆ ವಿದ್ಯುತ್ ತಂತಿ ತಗುಲಿ ಈ ಅವಘಡ ಸಂಭವಿಸಿದೆ.ಆನೆ ಸಾವಿಗೆ ಕೆ ಇ ಬಿ ಅಧಿಕಾರಿಗಳ ನಿರ್ಲಕ್ಷ ಕಾರಣ ಎಂದು ರೈತ ಮುಖಂಡರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಬಿಆರ್ ಟಿ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

ರೈತರು ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ದೂರು ನೀಡಿದ್ದರೂ ಪ್ರಯೋಜನವಿಲ್ಲ ಹಾಗೂ ಜಮೀನಿನ ಮಾಲೀಕನ ಮೇಲೆ ಎಫ್ ಐಅರ್ ಹಾಕದಂತೆ ರೈತರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

23/01/2022 08:10 am

Cinque Terre

71.49 K

Cinque Terre

0