ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ವೆಗೆ ಬಟ್ಟೆ ಖರೀದಿಸಲು ಹೋದ ತಮ್ಮ ಶವವಾಗಿ ಪತ್ತೆ, ಅಣ್ಣ ನಾಪತ್ತೆ.!

ದಾವಣಗೆರೆ: ಮದುವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆಯಾಗಿದ್ದು, ಅಣ್ಣ ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಹರಿಹರದ ವಿಜಯನಗರ ನಿವಾಸಿ ಅಲ್ತಾಫ್ (21) ಶವವಾಗಿ ಪತ್ತೆಯಾದ ಯುವಕ. ಈತನ ಸಹೋದರ ಇಬ್ರಾಹಿಂ (23) ನಾಪತ್ತೆಯಾಗಿದ್ದಾನೆ. ಇವರಿಬ್ಬರೂ ಸೋದರಸಂಬಂಧಿಗಳು. ಇಬ್ರಾಹಿಂಗೆ ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಮದುವೆ ಜವಳಿ ಖರೀದಿಸಲು ಮಂಗಳವಾರ ದಾವಣಗೆರೆಗೆ ಹೋಗಿದ್ದರು. ರಾತ್ರಿ 8:30ಕ್ಕೆ ಸಹೋದರರು ಮನೆಗೆ ಫೋನ್ ಮಾಡಿದ್ದರು. ಇದಾದ ನಂತರ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಬುಧವಾರ ಬೆಳಗ್ಗೆ ಇಬ್ಬರ ಪಾಲಕರು ಹರಿಹರ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಬುಧವಾರ ಸಂಜೆ ದಾವಣಗೆರೆಯ ಮಹಾಲಕ್ಷ್ಮೀ ಲೇಔಟ್ ಬಳಿ ಅಲ್ತಾಫ್ ಶವ ಪತ್ತೆಯಾಗಿದೆ.

ಶವದ ಕುತ್ತಿಗೆ ಮೇಲೆ ಹರಿತ ಚಾಕುವಿನಿಂದ ಕತ್ತರಿಸಿದ ಗುರುತಿದ್ದು, ಕೊಲೆ ನಡೆದಿದೆಯೋ ಅಥವಾ ಕೊಲೆ ಮಾಡಿ ತಂದು ಹಾಕಿದ್ದಾರೋ ಎಂಬ ಮಾಹಿತಿ ಇಲ್ಲ. ನಾಪತ್ತೆಯಾಗಿರುವ ಇಬ್ರಾಹಿಂ ಸುಳಿವು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಬೆರಳಚ್ಚು ‌ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

20/01/2022 03:23 pm

Cinque Terre

31.01 K

Cinque Terre

0