ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾತ್ರೋರಾತ್ರಿ ನುಗ್ಗಿ ಜಾನುವಾರು ಕದಿಯುತ್ತಿದ್ದ ಖತರ್ನಾಕ್ ಕಳ್ಳರು ಅರೆಸ್ಟ್

ಚಿಕ್ಕಬಳ್ಳಾಪುರ: ಜಿಲ್ಲೆಯ ಹಲವೆಡೆ ರೈತರ ನಿದ್ದೆಗೆಡಿಸಿ ಜಾನುವಾರು ಕದಿಯುತ್ತಿದ್ದ ಖತರ್ನಾಕ್ ಕಳ್ಳರು ಕಡೆಗೂ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈಗ ಅವರೆಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.

ಹರಿಯಾಣ ಮೂಲದ ಮೊಹಮ್ಮದ್ ಇರ್ಷಾದ್, ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಗ್ರಾಮದ ನಾರಾಯಣಸ್ವಾಮಿ, ನರಸಿಂಹಮೂರ್ತಿ ಬಂಧಿತ ಕಳ್ಳರು. ಆರೋಪಿಗಳು ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಜಾನುವಾರುಗಳಿಗೆ ಅನೆಸ್ತೇಷಿಯಾ ಕೊಟ್ಟು ಕಳ್ಳತನ‌ ಮಾಡುತ್ತಿದ್ದರು. ಇದರಿಂದ ರೈತರು ರೋಸಿ ಹೋಗಿದ್ದರು. ರಸ್ತೆ ಬದಿಯ ಜಾನುವಾರುಗಳೇ ಕಳ್ಳರ‌ ಟಾರ್ಗೆಟ್ ಆಗಿದ್ದವು.

ಕಳ್ಳರನ್ನು ಹಿಡಿಯಲು ಗ್ರಾಮಸ್ಥರು ಪ್ಲಾನ್ ರೂಪಿಸಿದ್ದರು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಸೋಮೇಶ್ವರದ ಬಳಿ‌ ಕಳ್ಳರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅವರ ಬಟ್ಟೆ ಬಿಚ್ಚಿ‌ ಚಪ್ಪಲಿ ತಲೆ ಮೇಲೆ ಇರಿಸಿ ಮಂಗಳಾರತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಳ್ಳರಿಗೆ ಧರ್ಮದೇಟು ಕೊಟ್ಟು ಪೆರೇಸಂದ್ರ ಪೊಲೀಸರಿಗೆ ಒಪ್ಪಿಸಿದ್ದಾರೆ.

Edited By : Shivu K
PublicNext

PublicNext

20/01/2022 12:31 pm

Cinque Terre

89.86 K

Cinque Terre

2

ಸಂಬಂಧಿತ ಸುದ್ದಿ