ಕೋಲಾರ: ಯಾರೋ ಕಿಡಿಗೇಡಿಗಳ ಕೃತ್ಯದಿಂದ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ವನಸಂಪತ್ತು ನಾಶವಾಗಿದೆ.
ಸುಮಾರು 2 ಕಿ.ಮೀ ವಾಪ್ತಿವರೆಗೂ ಬೆಂಕಿ ಆವರಿಸಿದೆ. ನವಿಲು, ಚಿರತೆ, ಜಿಂಕೆಗಳು ಸೇರಿದಂತೆ ಅನೇಕ ಪ್ರಾಣಿಗಳು ಅಗ್ನಿಗೆ ಆಹುತಿಯಾಗಿವೆ ಅಂತ ಹೇಳಲಾಗುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ತೆರಳಲು ಸಾಧ್ಯವಾಗದ ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
PublicNext
20/01/2022 08:50 am