ಮಂಡ್ಯ:ಕೋಮು ಸೌಹಾದರ್ತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದಕ್ಕೆ ಶ್ರೀರಂಗಪಟ್ಟಣದ ಪೊಲೀಸರು, ಕಾಳಿಮಠದ ರಿಷಿಕುಮಾರ್ ಸ್ವಾಮಿಯನ್ನ ಜೈಲಿಗೆ ಹಾಕಿದ್ದರು. ಆದರೆ, ಇಂದು JMFC ಕೋರ್ಟ್ ಮಧ್ಯಾಹ್ನ ಜಾಮೀನು ನೀಡಿದ್ದ ಹಿನ್ನೆಲೆಯಲ್ಲಿ ರಿಷಿಕುಮಾರ್ ಸ್ವಾಮಿ ಜೈಲಿನಿಂದ ಹೊರ ಬಂದಿದ್ದಾರೆ.
ರಿಷಿಕುಮಾರ್ ಸ್ವಾಮಿ ಜೈಲಿನಿಂದ ಹೊರ ಬಂದ ಕೂಡಲೇ, ಹಿಂದೂ ಸಂಘಟನೆಯ ಕಾರ್ಯಕರ್ತರು ಜಯಕಾರ ಕೂಗಿದರು. ಇದರಿಂದ ಕೋಪಗೊಂಡ ಜೈಲು ಸಿಬ್ಬಂದಿ ತಡೆದರು. ಹೀಗಾಗಿಯೇ ಕೆಲ ಹೊತ್ತು ಇಲ್ಲಿ ಕಾರ್ಯಕರ್ತರು ಮತ್ತು ಜೈಲು ಸಿಬ್ಬಂದಿ ನಡುವೆ ವಾಗ್ವಾದ ನಡೆದೇ ಹೋಯಿತು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಕಾರ್ಯಕರ್ತರು ಪೊಲೀಸ ವಿರುದ್ಧವೇ ಘೋಷಣೆ ಕೂಗಿದರು. ಕಾಳಿಸ್ವಾಮಿ ಬಂಧನಕ್ಕೂ ಕಿಡಿಕಾರಿದರು.
PublicNext
19/01/2022 08:57 pm