ಕೊಡಗು: ಫೈಲ್ ವರ್ಗಾವಣೆಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಈ ಪೈಕಿ 50 ಸಾವಿರ ರೂ. ಪಡೆಯುತ್ತಿದ್ದ ಕೊಡಗು ತಾಲೂಕು ಕಚೇರಿಯ ಶಿರಸ್ತೆದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕುಶಾಲನಗರ ತಾಲೂಕು ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ಶಿರಸ್ತೆದಾರ್ ವಿನೋದ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಂದಗೋವೆ ಗ್ರಾಮದ ಬೆಳ್ಳಿಯಪ್ಪ ಅವರಿಗೆ ಶಿರಸ್ತೆದಾರ್ ವಿನೋದ್ ಫೈಲ್ ವರ್ಗಾವಣೆಗಾಗಿ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ವಿಷಯವನ್ನು ಬೆಳ್ಳಿಯಪ್ಪ ಎಸಿಬಿಗೆ ತಿಳಿಸಿದ್ದಾರೆ. ಆ ಪೈಕಿ 50 ಸಾವಿರ ರೂ. ಹಣವನ್ನು ಕಚೇರಿ ಬಳಿಯ ಕ್ಯಾಂಟಿನ್ನಲ್ಲಿ ಸ್ವೀಕಾರ ಮಾಡುವಾಗ ದಾಳಿ ನಡೆಸಿದ ಅಧಿಕಾರಿಗಳ ತಂಡ ಶಿರಸ್ತೆದಾರರನ್ನು ರೆಂಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
PublicNext
19/01/2022 03:16 pm