ಹಾವೇರಿ: ಬಯಸಿದ್ದೆಲ್ಲ ಸಿಗದಿದ್ದರೇನಂತೆ ನೆಮ್ಮದಿ ಇದೆ ಸಾಕು. ಕುಬೇರ ಅಲ್ಲದಿದ್ದರೇನಂತೆ ನಾವು ನಗುತಿರಬೇಕು. ಈ ಮಾತಿನಂತೆ ಆ ಕುಟುಂಬ ಆನಂದಮಯ ಜೀವನ ಸಾಗಿಸುತ್ತಿತ್ತು. ಆದ್ರೆ ಆ ನೆಮ್ಮದಿಯ ಕುಟುಂಬಕ್ಕೆ ಆ ಕಿರಾತಕ ಸ್ನೇಹಿತನ ಕಣ್ಣು ಬಿದ್ದಿದ್ದೇ ತಡ. ಇದೀಗ ಆ ಕುಟುಂಬದಲ್ಲಿ ದುಃಖದ ಬಿರುಗಾಳಿ ಎದ್ದಿದೆ.
ರಸ್ತೆಯುದ್ದಕ್ಕೂ ಹೀಗೆ ಪೋಟೋ ಹಿಡಿದು ಕಳೆದು ಹೋದ ಹೆಂಡತಿ ಮಕ್ಕಳ ಬಗ್ಗೆ ಮಾಹಿತಿ ಪಡೆಯುತ್ತಿರುವ ವ್ಯಕ್ತಿ. ಮತ್ತೊಂದಡೆ ಹೆಂಡತಿ ಪೋಟೋ ಹಿಡಿದು ತನ್ನ ನೋವನ್ನು ಹೇಳಿಕೊಳ್ಳುತ್ತಿರುವ ದೃಶ್ಯ. ಇಷ್ಟಕ್ಕೂ ಈ ವ್ಯಕ್ತಿ ಯಾಕೆ ಇಷ್ಟು ಓಡಾಟ ನಡೆಸಿದ್ದಾನಂದ್ರೆ ತನ್ನ ಹೆಂಡತಿ ಮಕ್ಕಳಿಗಾಗಿ.
ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ. ಈತನ ಹೆಸರು ದಿಳ್ಳೆಪ್ಪ ಬುಡ್ಡಳ್ಳರ. ಮದುವೆಯಾಗಿ 15 ವರ್ಷ ಕಳೆದಿದೆ. ಮುದ್ದಾದ ಮೂರು ಗಂಡು ಮಕ್ಕಳಿದ್ದಾರೆ.
ಈ ತುಂಬು ಸಂಸಾರಕ್ಕೆ ಇತ್ತೀಚೆಗೆ ಎಂಟ್ರಿ ಕೊಟ್ಟ ಸ್ನೇಹಿತ ಸಣ್ಣನಾಗಪ್ಪ ಜವಲಿ ಇವರ ವಿಲನ್ ಆಗಿದ್ದಾನೆ.
ಹೀಗೆ ಈ ಫೋಟೋದಲ್ಲಿ ಕಾಣುತ್ತಿರುವ ಮಹಿಳೆ ದಿಳ್ಳೆಪ್ಪನ ಹೆಂಡತಿ. ಇನ್ನೊಂದು ಪೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಸಣ್ಣನಾಗಪ್ಪ ಜವಲಿಯೊಂದಿಗೆ ದಿಳ್ಳೆಪ್ಪನ ಪತ್ನಿ ಶಶಿಕಲಾ ಮಕ್ಕಳ ಸಮೇತ ಪರಾರಿಯಾಗಿದ್ದಾಳೆ.
ಸದ್ಯ ಕಣ್ಮರೆಯಾದ ಮಡದಿ ಮಕ್ಕಳಿಗಾಗಿ ದಿಳ್ಳೆಪ್ಪ ರಾಜ್ಯದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾನೆ.
ನೋಡಿದ್ರಲ್ಲಾ ಹೆಂಡತಿ ಮಾಡಬಾರದ್ದೆಲ್ಲ ಮಾಡಿ ಪರ ಪುರುಷನ ಜೊತೆ ಮಾಯವಾದರೂ ಮಡದಿ ಮಕ್ಕಳು ವಾಪಸ್ ಬರಲಿ ನನ್ನ ಕಣ್ಣ ಮುಂದೆ ಇರಲಿ ಎನ್ನುವ ದಿಳ್ಳೆಪ್ಪನ ಮಾತು ನಿಜಕ್ಕೂ ಮನಕಲಕುವಂತಿದೆ.
ಪೊಲೀಸ್ ಠಾಣೆಗೂ ದೂರು ನೀಡಿದ ದಿಳ್ಳೆಪ್ಪ ಹೆಂಡತಿಗಾಗಿ ಆಗಮನಕ್ಕಾಗಿ ಕಾಯುತ್ತಿದ್ದಾನೆ. ಆಕೆ ಮತ್ತೆ ವಾಪಸ್ ಬರ್ತಾಳಾ ಎಂಬ ಪ್ರಶ್ನೆ ಹಾಗೂ ನಿರೀಕ್ಷೆ ದಿಳ್ಳೆಪ್ಪನ ಮುಖಭಾವದಲ್ಲಿ ಎದ್ದು ಕಾಣುತ್ತಿದೆ.
PublicNext
17/01/2022 08:18 pm