ರಾಂಚಿ: ಮದ್ಯ ಖರೀದಿಗೆ ಹಣ ಕೊಡದ ಗರ್ಭಿಣಿ ಪತ್ನಿಯನ್ನೇ ಕೊಂದು ತಲೆಮರೆಸಿಕೊಂಡಿದ್ದ ಪಾಪಿಯನ್ನು ಜಾರ್ಖಂಡ್‌ನ ಛತ್ರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತಿಲೇಶ್ವರ ಗಂಜು ಎಂದು ಗುರುತಿಸಲಾಗಿದ್ದು, ಶುಕ್ರವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತಿಲೇಶ್ವರ್ ಕಳೆದ ವರ್ಷ ಮೇ 25 ರಂದು ಹಜಾರಿಬಾಗ್ ನಿವಾಸಿ ಪ್ರಿಯಾ ದೇವಿ ಅವರನ್ನು ವಿವಾಹವಾಗಿದ್ದ. ನಿತ್ಯವೂ ಮದ್ಯ ಸೇವನೆ ಮಾಡುತ್ತಿದ್ದ ತಿಲೇಶ್ವರ್ ಮನೆಯಲ್ಲಿ ಪ್ರಿಯಾಗೆ ಥಳಿಸುತ್ತಿದ್ದ. ಎಣ್ಣೆ ಖರೀದಿಸಲು ಹಣ ಇಲ್ಲದಿದ್ದಾಗ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ.
ಗುರುವಾರ ಮದ್ಯ ಖರೀದಿಸಲು ಪ್ರಿಯಾ ಪತಿ ತಿಲೇಶ್ವರ್‌ಗೆ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪಾಪಿ ತಿಲೇಶ್ವರ್ ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
PublicNext
16/01/2022 09:12 am