ಹಾವೇರಿ: ಪ್ರಧಾನ ಅರ್ಚಕ ಸ್ಥಾನಕ್ಕಾಗಿ ಇತಿಹಾಸ ಪ್ರಸಿದ್ಧಿ ಪಡೆದ ಮಾಲತೇಶ ದೇವರ ದೇವಸ್ಥಾನದ ಗರ್ಭಗುಡಿಯಲ್ಲಿ ಗಲಾಟೆ ನಡೆದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದ `ಮಾಲತೇಶ ದೇವರ' ಪೂಜೆ ಮಾಡುವ ಸಂಬಂಧ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಗೂರುಜಿ ಹಾಗೂ ದೇವಸ್ಥಾನದ ಪರಿಚಾರಕರಾಗಿರುವ ಶಿವಪ್ಪ ಉಪ್ಪಾರ, ಮೃತ್ಯುಂಜಯ ನಡುವೆ ತೀವ್ರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಬೆಳಗಿನ ಜಾವ ದೇವರ ಮೊದಲ ಪೂಜೆಗಾಗಿ ಪ್ರಧಾನ ಅರ್ಚಕ ಸಂತೋಷ ಭಟ್ ಘಂಟೆ ಕೇಳಿದ್ದಾರೆ, ಆಗ ಘಂಟೆ ಕೊಡದೆ ಅರ್ಚಕ ಸಂತೋಷ ಭಟ್‌ರಿಗೆ ಮೃತ್ಯುಂಜಯ, ದೇವರ ತ್ರಿಶೂಲ ದಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ದೇಸ್ಥಾನದಲ್ಲಿದ್ದ ಮಹಿಳೆಯರು ತಡೆಯುವ ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಈಗಾಗಲೇ ರಾಣೆಬೇನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
PublicNext
13/01/2022 11:40 am