ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ನೋ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ತಯಾರಿಸಿದ ಪಾಪಿ ಸೇರಿ ಐವರ ಬಂಧನ

ಲಕ್ನೋ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದ ಬೀದಿ ವ್ಯಾಪಾರಿ ಸೇರಿ ಐವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಲಕ್ನೋದ ಹೊರವಲಯದ ಕಾಕೋರಿಯ ರಸ್ತೆಬದಿಯ ಉಪಾಹಾರ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಬೀದಿ ವ್ಯಾಪಾರಿಯು ರೊಟ್ಟಿ ತಯಾರಿಸುವಾಗ ಹಿಟ್ಟಿನ ಮೇಲೆ ಉಗುಳುತ್ತಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

22 ಸೆಕೆಂಡಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸದ್ಯ ಬೀದಿ ವ್ಯಾಪಾರಿ ಹಾಗೂ ನಾಲ್ವರು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಧಾಬಾ ಮಾಲೀಕ ಯಾಕೂಬ್ ಮತ್ತು ಡ್ಯಾನಿಶ್, ಹಫೀಜ್, ಮುಖ್ತಾರ್, ಫಿರೋಜ್ ಮತ್ತು ಅನ್ವರ್ ಬಂಧಿತರು. ಆರೋಪಿಗಳ ವಿರುದ್ಧ ರೋಗ ಹರಡಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Edited By : Manjunath H D
PublicNext

PublicNext

12/01/2022 04:52 pm

Cinque Terre

73.11 K

Cinque Terre

15