ಶಿವಮೊಗ್ಗ: ಸಾಮಾಜಿಕ ತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿತ್ತು. ರೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ ಅಂತಲೇ ಸುದ್ದಿ ಹರಿದಾಡಿತ್ತು.ಆದರೆ ಇದರ ಹಿಂದಿನ ಅಸಲಿ ಕಥೆನೇ ಬೇರೆ ಇದೆ.ಬನ್ನಿ,ಹೇಳ್ತೀವಿ.
ಬೆಂಗಳೂರಿನಿಂದ ನಿವೇದಿತಾ ಮಕ್ಕಳ ಜೊತೆಗೆ ಶಿವಮೊಗ್ಗಕ್ಕೆ ಹೊರಟಿದ್ದರು.ಮಗನ ಕೈಮುರಿದಿದ್ದರಿಂದಲೇ ಶಿವಮೊಗ್ಗಕ್ಕೆ ಬರ್ತಾಯಿದ್ದರು. ಆದರೆ ಶಿವಮೊಗ್ಗದಲ್ಲಿ ಇಳಿಯಬೇಕಿದ್ದ ನಿವೇದಿತಾ ನಿದ್ದೆ ಹತ್ತಿದ್ದರಿಂದ ತಾಳಗುಪ್ಪದವರೆಗೂ ಬಂದು ಬಿಟ್ಟಿದ್ದರು.
ಆದರೆ ರೈಲ್ವೆ ಬೋಗಿಯಲ್ಲಿಯೇ ಡೋರ್ ಲಾಕ್ ಮಾಡಿಯೇ ನಿವೇದಿತಾ ಮಕ್ಕಳ ಜೊತೆಗೆ ಇದ್ದರು. ಇದನ್ನ ಕಂಡ ರೈಲ್ವೆ ಸಿಬ್ಬಂದಿ ಕಂಡು ಬೆಚ್ಚಿದ್ದರು.ಮಗುವಿನೊಟ್ಟಿಗೆ ಆತ್ಮಹತ್ಯೆಗೂ ಪ್ರಯತ್ನಿಸುತ್ತಿದ್ದಾಳೆ ಈ ಮಹಿಳೆಯಂತೂ ಭಾವಿಸಿದ್ದರು. ಡೋರ್ ಬಡೆದು ಒತ್ತಾಯದಿಂದಲೇ ಡೋರ್ ತೆಗೆಸಿದ್ದರು. ಹೊರ ಬಂದ್ಮಲೆ ಕಪಾಳಕ್ಕೂ ಹೊಡೆದಿದ್ದರು.
ಆದರೆ ವಿಚಾರಣೆ ವೇಳೆ ಎಲ್ಲವನ್ನೂ ಹೇಳಿದ ನಿವೇದಿತಾ,ತಾನು ನಿದ್ದೆಯಲ್ಲಿಯೇ ಇದೆ. ಮಕ್ಕಳು ಬೋಗಿ ಇಳಿಯಲೇಬಾರದು ಅಂತಲೆ ಡೋರ್ ಹಾಕಿದ್ದೇ ಅಷ್ಟೆ. ಆದರೆ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ ಅಂತಲೇ ಹೇಳಿದ್ದಾರೆ.
ಸದ್ಯ ನಿವೇದಿತಾ ಶಿವಮೊಗ್ಗ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.
PublicNext
12/01/2022 12:19 pm