ಕೋಲಾರ: ಪೇಪರ್ ಆಯುವ ನೆಪದಲ್ಲಿ ಬಂದ ಇಬ್ಬರು ತಮಿಳುನಾಡು ಮೂಲದ ಮಹಿಳೆಯರು ಕಳ್ಳತಕ್ಕೆ ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಈ ಘಟನೆ ಕೋಲಾರ ತಾಲೂಕಿನ ಹೊಳೂರು ಗ್ರಾಮದಲ್ಲಿ ನಡೆದಿದೆ.
ಹೊಳೂರಿನ ಮಮತಾ ಅನ್ನೋರ ಮನೆಯಲ್ಲಿ ಯಾರು ಇಲ್ಲದ್ದನ್ನ ನೋಡಿಯೇ ಪೇಪರ್ ಆಯಲು ಬಂದಿದ್ದ ಮಹಿಳೆಯರಿಬ್ಬರು ಮನೆ ಹೊಕ್ಕಿದ್ದಾರೆ. ಅಲ್ಲಿದ್ದ ಕಬ್ಬಿಣದ ಬೀರು ಒಡೆದು ಕಳ್ಳತನ ಮಾಡುತ್ತಿದ್ದರು. ಆದರೆ ಈ ವೇಳೆ ಶಬ್ದ ಕೂಡ ಆಗಿದೆ. ಇದನ್ನ ಕೇಳಿಯೇ ನೆರೆ-ಹೊರೆಯವರು ಮನೆ ಮಾಲೀಕರಾದ ಮಮತಾಗೆ ಮಾಹಿತಿ ಕೊಟ್ಟರು.
ಕಳ್ಳಿಯರನ್ನ ಮನೆಯಲ್ಲಿಯೇ ಕೂಡಿ ಹಾಕಿದರು. ಪೊಲೀಸರಿಗೂ ಮಾಹಿತಿ ಕೊಟ್ಟರು. ಕೋಲಾರ ಗ್ರಾಮಾಂತರ ಪೊಲೀಸರು ಈ ಕಳ್ಳಿಯರನ್ನ ಅರೆಸ್ಟ್ ಮಾಡಿದ್ದಾರೆ.
PublicNext
11/01/2022 05:52 pm