ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿ ಹೊರ ಹೋಗುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ತಾಯಿ-ಮಗಳು: ಕಾರಣ ನಿಗೂಢ

ಆನೇಕಲ್(ಬೆಂಗಳೂರು): ಪತಿ ಮನೆಯಿಂದ ಹೊರ ಹೋಗುತ್ತಿದ್ದಂತೆ ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆನೇಕಲ್ ಗಡಿಯಲ್ಲಿ ಹೊಂದಿಕೊಂಡಿರುವ ತಮಿಳು ನಾಡಿನ ಹೊಸೂರಿನ ಅಣ್ಣಾನಗರದಲ್ಲಿ ಈ ಘಟನೆ ನಡೆದಿದೆ. ನೂರ್ಜಾನ್(38) ಹಾಗೂ ಮಗಳು ಮೊಸಿಂಜಾನ್ (17) ಎಂಬಾತರೇ ಆತ್ಮಹತ್ಯೆಗೆ ಶರಣಾದವರು. ನೂರ್ಜಾನ್ ಪತಿ ಮಹಬೂಬ್ ಪಾಷಾ ಮನೆಯಿಂದ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

Edited By : Nagaraj Tulugeri
PublicNext

PublicNext

07/01/2022 03:35 pm

Cinque Terre

137.24 K

Cinque Terre

0