ನೋಯ್ಡಾ:ಗ್ರೇಟರ್ ನೋಯ್ಡಾದ ಎರಡು ಪ್ರತ್ಯೇಕ ಗೆಸ್ಟ್ ಹೌಸ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡ್ತಿದ್ದ ಐವರು ಯುವತಿಯರು ಸೇರಿ 36 ಜನರನ್ನ ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.
ಪಾರ್ಟಿಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿಯೇ ಪೊಲೀಸರು ಮೊದಲು ಒಂದು ಗೆಸ್ಟ್ ಹೌಸ್ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿ ಕೇವಲ ಐದು ಜನ ಮಾತ್ರ ಸಿಕ್ಕಿದ್ದಾರೆ.ಈ ಸಮಯದಲ್ಲಿಯೇ ಮತ್ತೊಂದು ಗೆಸ್ಟ್ ಹೌಸ್ ನಲ್ಲಿ ನೃತ್ಯದ ಪಾರ್ಟಿ ಇದೆ ಅಂತಲೇ ಪೊಲೀಸರಿಗೆ ಗೊತ್ತಾಗಿದೆ. ಆಗಲೇ ಪೊಲೀಸರು ಅಲ್ಲಿ ದಾಳಿ ಮಾಡಿದ್ದಾರೆ. 31 ಜನರ ಅರೆಸ್ಟ್ ಮಾಡಿದ್ದಾರೆ. ಈ ಒಟ್ಟು 36 ಜರನಲ್ಲಿ ಐವರು ಯುವತಿಯರೂ ಇದ್ದಾರೆ.
PublicNext
07/01/2022 12:56 pm