ಅರ್ಜೆಂಟೀನಾ: ಪೊಲೀಸ್ ಅಧಿಕಾರಿಯನ್ನು ಕೊಲೆಗೈದು ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗೆ ಮಹಿಳಾ ನ್ಯಾಯಾಧೀಶೆ ಮುತ್ತಿಕ್ಕಿದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳಾ ನ್ಯಾಯಾಧೀಶೆ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆ ಅಪರಾಧಿ ಕ್ರಿಶ್ಚಿಯನ್ ಬುಸ್ಟೊಸ್ ಪರ ತನ್ನ ಅಭಿಪ್ರಾಯ ಮಂಡಿಸುತ್ತಿದ್ದ ನ್ಯಾಯಾಧೀಶೆ ಮರಿಲ್ ಸೌರೆಜ್ ಈ ರೀತಿ ನಡೆದುಕೊಂಡಿದ್ದಾರೆ. ಅಪರಾಧಿ ಜೊತೆ ಲಿಪ್ ಲಾಕ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶೆ, ಆತನ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ. ಆತನನ್ನು ಮಾತನಾಡಿಸಲು ಜೈಲಿಗೆ ಹೋದಾಗ ಮುತ್ತಿಕ್ಕಿದ್ದು ಹೌದು ಎಂದಿದ್ದಾರೆ.
PublicNext
06/01/2022 09:35 pm