ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸಿಬಿ ಬಲೆಗೆ ಬಿದ್ದ ವಾಟರ್ ಬೋರ್ಡ್ ಎಇಇ ಬಾಬು ನದಾಫ್

ವಿಜಯಪುರ:ಕಾರ್ಮಿಕ ಪೂರೈಕೆ ಗುತ್ತಿಗೆದಾರನಿಂದ ಲಂಚ ಪಡೆಯುವ ವೇಳೆ ವಾಟರ್ ಬೋರ್ಡ್ ಎಇಇ ಬಾಬು ನದಾಫ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಂಬರ್-02 ರ ಎಇಇ ಬಾಬುನನ್ನ ಎಸಿಬಿ ಬಲೆ ಬೀಸಿ ಹಿಡಿದು ಹಾಕಿದೆ.

ಕಾರ್ಮಿಕ ಗುತ್ತಿಗೆದಾರರ ಸಗರ ಎಂಬುವ ವ್ಯಕ್ತಿಯಿಂದ 50 ಸಾವಿರ ರೂಪಾಯಿ ಸ್ವೀಕರಿಸುತ್ತಿರೋ ವೇಳೆನೆ ಎಸಿಬಿ ದಾಳಿ ಮಾಡಿದೆ.

ಲಂಚ ಬೇಕೆ ಬೇಕು ಅಂತಲೇ ಸಗರ ಗೆ ಎಇಇ ಬಾಬು ನದಾಫ್ ಬೇಡಿಕೆ ಇಟ್ಟಿದ್ದ. ಅದಕ್ಕೇನೆ ಸಗರ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳಾದ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್ಸ್ಪೆಕ್ಟರ್ ಗಳಾದ ಪರಮೇಶ್ವರ ಹಾಗೂ ಚಂದ್ರಕಲಾ ದಾಳಿ ಮಾಡಿ ಬಾಬು ನದಾಫ್‌ ನನ್ನ ಹಿಡಿದು ಹಾಕಿದ್ದಾರೆ.

Edited By :
PublicNext

PublicNext

04/01/2022 09:28 pm

Cinque Terre

42.51 K

Cinque Terre

4