ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಪತ್ನಿಯನ್ನೆ ಪತಿ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದಿದೆ.
ಟೈಲರ್ ಕೆಲಸ ಮಾಡುತ್ತಿದ್ದ ಮದೀನಾ ಬಂಡಿ (27) ಅನ್ನೋ ಮಹಿಳೆನೇ ಪತಿಯಿಂದಲೇ ಹತ್ಯೆ ಆದ ದುರ್ದೈವಿ. ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದ ಪತಿ ಮೆಹಬೂಬ್ ಬಂಡಿ,ಮಕ್ಕಳ ಎದುರೇ ಕುಡಿದ ಮತ್ತಿನಲ್ಲಿ ಪತ್ನಿ ಜೊತೆಗೆ ಜಗಳವಾಡಿದ್ದಾನೆ. ಪತ್ನಿಯನ್ನ ಕೊಲೆನೂ ಮಾಡಿದ್ದಾನೆ.
ಅಮ್ಮನನ್ನ ಕಳೆದುಕೊಂಡ 5 ಮತ್ತು 9 ವರ್ಷದ ಮಕ್ಕಳು ಅನಾಥವಾಗಿದ್ದಾರೆ. ಕೊಲೆ ಆರೋಪಿ ಮಹೆಬೂಬ್ ಪರಾರಿ ಆಗಿದ್ದಾನೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ.
PublicNext
03/01/2022 07:05 pm