ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಳಗೇರಿ: ಮನೆ, ಜ್ಯುವೆಲ್ಲರಿಗೆ ಕನ್ನ; ಬೆಳ್ಳಿ- ಬಂಗಾರ ಅಪಹರಣ

ಬಾಗಲಕೋಟೆ: ಕುಳಗೇರಿ ಕ್ರಾಸ್ ನಲ್ಲಿರುವ ಬೀಗ ಹಾಕಿದ ಮನೆ ಹಾಗೂ ಬಂಗಾರದ ಅಂಗಡಿಗೆ ಖದೀಮರು ಕನ್ನಹಾಕಿರುವ ಘಟನೆ

ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ನಲ್ಲಿ ನಡೆದಿದೆ.

ಬಂಗಾರ ಅಂಗಡಿ ಶಟರ್ಸ್ ಮುರಿದು ಕಳ್ಳತನ ಮಾಡಿರುವ ಚಾಲಾಕಿಗಳು ಇನ್ನೊಂದೆಡೆ ಮನೆ ಕೀಲಿ ಮುರಿದು ತಿಜೋರಿಯಲ್ಲಿದ್ದ ಬಂಗಾರ ಬೆಳ್ಳಿಯನ್ನೂ ಕದ್ದು ಪರಾರಿಯಾಗಿದ್ದಾರೆ.

ಬಂಗಾರದ ಅಂಗಡಿ ಶಟರ್ಸ್ ಮುರಿಯಲು 5 ಜನ ಪ್ರಯತ್ನಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಬಾದಾಮಿ ಪೊಲೀಸರು ಶ್ವಾನ ದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗೀಗ ಕುಳಗೇರಿ ಕ್ರಾಸ್ ಸುತ್ತ-ಮುತ್ತ ಕಳ್ಳರ ಹಾವಳಿ ಹೆಚ್ಚಿದ್ದು, ಖದೀಮರ ಹೆಡೆಮುರಿ ಕಟ್ಟಲು ಖಾಕಿ ಪಡೆ ಅಲರ್ಟ್ ಆಗಿದೆ‌.

Edited By : Nagesh Gaonkar
PublicNext

PublicNext

01/01/2022 05:52 pm

Cinque Terre

52.07 K

Cinque Terre

1

ಸಂಬಂಧಿತ ಸುದ್ದಿ