ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೀಸೆ ಚಿಗುರದ ಹುಡುಗ, ಆಸೆ ತೀರದ ಹುಡುಗಿ: ಮದುವೆಯಾಗಿ ಪೊಲೀಸರ ಗೆಸ್ಟ್ ಆದರು!

ಕೊಟ್ವಾಲಿ(ಪಶ್ಚಿಮ ಬಂಗಾಳ):‌ ಸಾಮಾಜಿಕ ಜಾಲತಾಣಗಳ ಸದ್ಬಳಕೆ ಎಷ್ಟಾಗುತ್ತಿದೆಯೋ ದುರ್ಬಳಕೆಯೂ ಅದರಷ್ಟೇ ಆಗುತ್ತಿದೆ. ಹೀಗೆ ಫೇಸ್‌ಬುಕ್ ಮೂಲಕ ಅವರಿಬ್ಬರ ಪರಿಚಯ ಆಗಿದೆ. ಅಲ್ಲಿಂದಲೇ ಸ್ನೇಹವೂ ಚಿಗುರಿದೆ‌. ಅದು ಅಲ್ಲಿಗಷ್ಟೇ ನಿಂತಿದ್ದರೆ ಸುದ್ದಿಯಾಗುತ್ತಿರಲಿಲ್ಲ. 15ರ ಹರೆಯದ ಈತನಿಗೂ, 22ರ ಅಕೆಗೂ ಲವ್ ಆಗಿಬಿಟ್ಟಿದೆ. ಕೊನೆಗೆ ಓಡಿ ಹೋಗಿ ಮದುವೆ ಮಾಡಿಕೊಡು ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಯೆಸ್..ಇಂತದ್ದೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಾಡಿಯಾದ ಕೊಟ್ವಾಲಿ ನಿವಾಸಿ 15 ವರ್ಷದ ಬಾಲಕ ಹಾಗೂ ಶಾಂತಿನಗರ ಬಾಲಕ 22 ವರ್ಷದ ಯುವತಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾರೆ. ಮನೆಯವರಿಗೆ ತಿಳಿಯದಂತೆ ಇದೇ ಡಿಸೆಂಬರ್ 25ರಂದು ಮನೆಯಿಂದ ಓಡಿ ಹೋಗಿದ್ದಾರೆ. ಹಾಗೂ ಮದುವೆ ಆಗಿದ್ದಾರೆ.

ನಂತರ ವಾಪಸ್ ಊರಿಗೆ ಬರುವ ವೇಳೆ ರೈಲಿನಲ್ಲಿ ತಮ್ಮ ಮುಂದಿನ ಜೀವನದ ಹಗ್ಗೆ ಗಹನವಾಗಿ ಚರ್ಚೆ ಮಾಡಿದ್ದಾರೆ. ಇದನ್ನು ಕೇಳಿಸಿಕೊಂಡ ಅಕ್ಕ-ಪಕ್ಕದವರಿಗೆ ಅನುಮಾನ ಬಂದಿದೆ. ಹೀಗಾಗಿ ಕೇಳಿಸಿಕೊಂಡವರು ಚೈಲ್ಡ್ ಹೆಲ್ಪ್ ಲೈನ್‌ಗೆ ಕರೆ ಮಾಡಿದ್ದಾರೆ. ಆಗ ಈ ಮೀಸೆ ಚಿಗುರದ ಹುಡುಗ ಹಾಗೂ ಆಸೆ ತೀರದ ಹುಡುಗಿ ತಗಲಾಕಿಕೊಂಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

Edited By : Nagaraj Tulugeri
PublicNext

PublicNext

31/12/2021 09:02 pm

Cinque Terre

115.16 K

Cinque Terre

14

ಸಂಬಂಧಿತ ಸುದ್ದಿ