ನವದೆಹಲಿ:ನಾಲ್ಕೈದು ಯುವಕರು. ಒಬ್ಬನ ಕೈಯಲ್ಲಿ ಚಾಕು. ಕ್ಷಣ ಮಾತ್ರದಲ್ಲಿಯೇ ಒಬ್ಬನನ್ನ ಚುಚ್ಚಿದ ಮತ್ತೊಬ್ಬ.ಇದು ಸಿನಿಮಾ ಅಲ್ಲ. ರಿಯಲ್ ಘಟನೆ.ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲೂ ಕೊಲೆಗೈಯುವ ದೃಶ್ಯ ಸೆರೆ ಆಗಿದೆ.
ಚಾಕುವಿನಿಂದ ಚುಚ್ಚಿಸಿಕೊಂಡು ಸತ್ತ ವ್ಯಕ್ತಿಯ ಹೆಸರು ಶಾರುಕ್. ಈತ ಕ್ರಿಮಿನಲ್ ಬ್ಯಾಗ್ರೌಂಡ್ ಇರೋ ವ್ಯಕ್ತಿ.ಮೊನ್ನೆ ತಾನೇ ಜೈಲಿನಿಂದ ಹೊರಗೆ ಬಂದಿದ್ದ. ಮದುವೆ ಆತ ಈ ಶಾರುಕ್,ಯುವತಿ ಜತೆಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಅದೇ ನೋಡಿ ಈತನ ಸಾವಿಗೆ ಕಾರಣ ಆಗಿರೋದು.
ಹೌದು ಯುವತಿಯ ಅಣ್ಣನಿಗೆ ಈ ವಿಷಯ ತಿಳಿದಿದ್ದೇ ತಡ. ನಾಲ್ಕೈದು ಹುಡುಗರನ್ನ ಹಾಕಿಕೊಂಡು ಹುಡುಗಿಯ ಅಣ್ಣ ಶಾರುಕ್ ಮೇಲೆ ಅಟ್ಯಾಕ್ ಮಾಡಿಯೇ ಬಿಟ್ಟಿದ್ದಾರೆ. ಚಾಕುವಿನಿಂದ ಚುಚ್ಚಿ-ಚುಚ್ಚಿ ದಾಳಿ ಮಾಡಿದ್ದಾನೆ. ಸ್ಥಳಕ್ಕೆ ಆ ಕೂಡಲೇ ಪೊಲೀಸರೂ ಬಂದರು. ಶಾರುಕ್ ನ್ನ ಆಸ್ಪತ್ರೆಗೂ ಸಾಗಿಸಿದರು. ಆದರೆ ಚಿಕಿತ್ಸೆ ಫಲಿಸೆ ಶಾರುಕ್ ಸತ್ತು ಹೋಗಿದ್ದಾನೆ.
ಈ ಕೇಸ್‌ಗೆ ಸಂಬಂಧಿಸಿದಂತೆ ಜುಬೇರ್,ಆದಿತ್ಯ,ಜಾಫರ್‌ಹೆಸರನ ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ತನಿಖೆನೂ ಮುಂದುವರೆಸಿದ್ದಾರೆ.
PublicNext
31/12/2021 10:45 am