ಬೆಂಗಳೂರು:ಶಾಮನಿಸಂ ಏನ್ ಇದು..ಹೌದು ಇದನ್ನ ನಾವು ನೀವು ಕೇಳಿರೋದಿಲ್ಲ ಬಿಡಿ.ಆದರೆ ಇದು ಆತ್ಮಗಳೊಂದಿಗೆ ಮಾತನಾಡವು ವಿದ್ಯೆ. ಅರೆ ಪ್ರಜ್ಞಾವಸ್ತೆಯಲ್ಲಿಯೇ ಎಲ್ಲವು ನಡೆದು ಬಿಡುತ್ತದೆ. ಆದರೆ, ಇದನ್ನ ಅಭ್ಯಾಸ ಮಾಡ್ತಿದ್ದ 17 ವರ್ಷದ ಬೆಂಗಳೂರಿನ ಹುಡುಗಿಯೊಬ್ಬಳು ಕಳೆದ 2 ತಿಂಗಳಿನಿಂದ ನಾಪತ್ತೆ ಆಗಿದ್ದಾಳೆ.
ಹೌದು ಇಂತಹದೊಂದು ಸತ್ಯ ಈಗ ಬೆಳಕಿಗೆ ಬಂದಿದೆ. ಶಾಮನಿಸಂ ಅನ್ನ ಅತೀಯಾಗಿಯೇ ಹೆಚ್ಚಿಕೊಂಡಿದ್ದ ಹುಡುಗಿ ಅನುಷ್ಕಾ ಈಗ ನಾಪತ್ತೆ ಆಗಿದ್ದಾಳೆ. 12ನೇ ತರಗತಿ ಮುಗಿಸಿದ ಬಳಿಕ ಶಾಮನಿಸಂ ಬಗ್ಗೆ ಅತಿಯಾಗಿಯೇ ಅಟ್ರ್ಯಾಕ್ಟ್ ಆಗಿದ್ದ ಅನುಷ್ಕಾ, 2,500 ರೂಪಾಯಿ ದುಡ್ಡು ಮತ್ತು ಬಟ್ಟೆಗಳನ್ನ ತೆಗೆದುಕೊಂಡು ಎರಡು ತಿಂಗಳ ಹಿಂದೆ ಅಕ್ಟೋಬರ್-31 ರಂದು ನಾಪತ್ತೆ ಆಗಿದ್ದಾಳೆ.
ತಮ್ಮ ಮಗಳ ಮೇಲೆ ಯಾರೋ ವಾಪಾಚಾರ ಮಾಡಿಸಿದ್ದಾರೆ. ಅದಕ್ಕೇನೆ ಆಕೆ ಮನೆ ಬಿಟ್ಟುಹೋಗಿದ್ದಾಳೆ ಎಂದು ಪೋಷಕರು ಈಗ ದೂರಿದ್ದಾರೆ. ಪೊಲೀಸರಿಗೂ ದೂರು ಕೊಟ್ಟಿದ್ದಾರೆ. ಪೊಲೀಸರೂ ಕೂಡ ಸಿಸಿಟಿವಿಯ ಎಲ್ಲ ವೀಡಿಯೋಗಳನ್ನ ಪರಿಶೀಲಿಸುತ್ತಲೇ ಇದ್ದಾರೆ.
ಆದರೂ ಏನೂ ಪ್ರಯೋಜನ ಆಗಿಯೇ ಇಲ್ಲ ಎಂದೇ ಪೋಷಕರು ಈಗ ಟ್ವಿಟರ್ ಮೊರೆ ಹೋಗಿದ್ದಾರೆ. ಮಗಳನ್ನ ಹುಡುಕಿಕೊಡಿ ಅಂತಲೂ ಕೇಳಿಕೊಂಡಿದ್ದಾರೆ.
PublicNext
31/12/2021 07:59 am