ಬೆಂಗಳೂರು:ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಮಾಡೋರನ್ನ ಟೆಸ್ಟ್ ಮಾಡ್ತಾರೆ. ಇದು ಕಾಮನ್ ವಿಷಯ.ಆದರೆ ಬೆಂಗಳೂರಿನಲ್ಲಿ ಇಬ್ಬರು ಕುಡುಕರು ಪೊಲೀಸರನ್ನೇ ಡ್ರಿಂಕ್ ಅಂಡ್ , ಡ್ರೈವ್ ಟೆಸ್ಟ್ ಮಾಡಿ ರಾದ್ಧಾಂತ ಮಾಡಿದ್ದಾರೆ.
ಹೌದು. ಕುಡಿದ ಮತ್ತಿನಲ್ಲಿದ್ದ ಇಬ್ಬರು ಬೈಕ್ ಸವಾರರನ್ನ ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಿದರು. ಆದರೆ ಫುಲ್ ಟೈಟ್ ಆಗಿದ್ದ ಇವರು, ಪೊಲೀಸರಿಗೇನೆ ಆಲ್ಕೋಹಾಲ್ ಮೀಟರ್ ಊದಿಸಿದ್ದಾರೆ. ನೀವೇ ಕುಡಿದಿರೋದು ಅಂತ ಪೊಲೀಸರ ಜೊತೆಗೂ ಜಗಳವಾಡಿದ್ದಾರೆ.
ಕೊನೆಗೆ ಪೊಲೀಸರು ಇವರನ್ನ ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಠಾಣೆಗೂ ಕರೆದುಕೊಡು ಹೋಗಿದ್ದಾರೆ. ಈ ಘಟನೆ ಈಗ ಬೆಳಕಿಗೆ ಬಂದಿದೆ.
PublicNext
30/12/2021 07:35 pm